ADVERTISEMENT

ಚಾರ್ಮಾಡಿ ಘಾಟಿ ರಸ್ತೆಯಲ್ಲೇ ನಿಂತ ಕಾಡಾನೆ: ಮಂಗಳೂರು–ಚಿಕ್ಕಮಗಳೂರು ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 7:15 IST
Last Updated 10 ಜನವರಿ 2026, 7:15 IST
<div class="paragraphs"><p>ರಸ್ತೆಯಲ್ಲಿ ಕಾಡಾನೆ</p></div>

ರಸ್ತೆಯಲ್ಲಿ ಕಾಡಾನೆ

   

ಮೂಡಿಗೆರೆ(ಚಿಕ್ಕಮಗಳೂರು): ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗವೊಂದು ರಸ್ತೆ ಮಧ್ಯದಲ್ಲಿ ನಿಂತಿದ್ದು, ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದೆ.

ಚಾರ್ಮಾಡಿ ಘಾಟಿಯ 2ನೇ ಮತ್ತು 3ನೇ ತಿರುವಿನ ನಡುವೆ ರಸ್ತೆ ಮಧ್ಯದಲ್ಲೇ ಓಡಾಡುತ್ತಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ADVERTISEMENT

ಶುಕ್ರವಾರ ಮಧ್ಯರಾತ್ರಿ ಕೂಡ ಇದೇ ಸ್ಥಳದಲ್ಲಿ ಆನೆ ನಿಂತು ಒಂದೂವರೆ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಶನಿವಾರ ಬೆಳಿಗ್ಗೆ ಮತ್ತೆ ಅದೇ ಸ್ಥಳಕ್ಕೆ ಆನೆ ಬಂದಿದ್ದು, ಕಾಡಾನೆಗೆ ಹೆದರಿ ಪ್ರಯಾಣಿಕರು ಅಲ್ಲೇ ನಿಂತಿದ್ದರು. ದಕ್ಷಿಣ ಕನ್ನಡ–ಚಿಕ್ಕಮಗಳೂರು ನಡುವೆ ವಾಹನ ಸಂಚಾರ ಸ್ಥಗಿತಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.