ADVERTISEMENT

ಮುಂದಿನ ವರ್ಷ ಡಿಸೆಂಬರ್ ವೇಳೆಗೆ ದಾವಣಗೆರೆ-ತುಮಕೂರು ರೈಲುಮಾರ್ಗ ಪೂರ್ಣ; ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 9:47 IST
Last Updated 26 ಫೆಬ್ರುವರಿ 2026, 9:47 IST
<div class="paragraphs"><p>ಅಧಿಕಾರಿಗಳ ಜೊತೆ ವಿ.ಸೋಮಣ್ಣ ಚರ್ಚೆ</p></div>

ಅಧಿಕಾರಿಗಳ ಜೊತೆ ವಿ.ಸೋಮಣ್ಣ ಚರ್ಚೆ

   

ಚಿತ್ರದುರ್ಗ: ದಾವಣಗೆರೆ- ಚಿತ್ರದುರ್ಗ- ತುಮಕೂರು ನೇರ ರೈಲು ಮಾರ್ಗ 2027, ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ತಾಲ್ಲೂಕಿನ ಹಂಪನೂರು ಗ್ರಾಮದ ಬಳಿ ಗುರುವಾರ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.

ADVERTISEMENT

'ದಾವಣಗೆರೆ- ತುಮಕೂರು ಮಾರ್ಗ ಮಾತ್ರವಲ್ಲದೇ ಗದಗ- ವಾಡಿ, ರಾಯದುರ್ಗ- ತುಮಕೂರು ಮಾರ್ಗವನ್ನೂ 2027ರ ವೇಳೆಗೆ ಪೂರ್ಣಗೊಳಿಸಲಾಗುವುದು' ಎಂದರು.

'ದಾವಣಗೆರೆಯಿಂದ ಹೆಬ್ಬಾಳ ಗ್ರಾಮದವರೆಗೆ ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ. ನಾನು ಮೊಟಾರ್ ಟ್ರಾಲಿ ಮೂಲಕ ಸಂಚರಿಸಿ ಪರಿಶೀಲಿಸಿದ್ದೇನೆ. ಚಿತ್ರದುರ್ಗದ ಬಳಿ ಕಾಮಗಾರಿ ಕೊಂಚ ತಡವಾಗಿದೆ. 6 ತಿಂಗಳೊಳಗೆ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸೂಚಿಸಿದ್ದೇ‌ನೆ' ಎಂದರು.

'ನಾನು ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿನಿಂದ ರೈಲಿನಲ್ಲಿ ಹೊರಟೆ. ದಾವಣಗೆರೆ ತಲುಪಲು 5 ಗಂಟೆ ಹಿಡಿಯಿತು. ನೇರ ರೈಲು ಮಾರ್ಗ ಪೂರ್ಣಗೊಂಡರೆ ಎರಡೂವರೆ ಗಂಟೆಯಲ್ಲಿ ಬೆಂಗಳೂರು- ದಾವಣಗೆರೆ ನಡುವೆ ಓಡಾಡಬಹುದು. ಈ ರೈಲು ಮಾರ್ಗ ಬಯಲುಸೀಮೆ ಜನರ ಬಹು ಕಾಲದ ಕನಸಾಗಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.