ಶೈಕ್ಷಣಿಕ ಮೇಳ
ಚಿತ್ರದುರ್ಗ: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗವು ನಗರದ ತುರುವನೂರು ರಸ್ತೆಯ ಕಮ್ಮರೆಡ್ಡಿ ಸಮುದಾಯ ಭವನದಲ್ಲಿ ‘ಜ್ಞಾನ ದೇಗುಲ’ ಶೈಕ್ಷಣಿಕ ಮೇಳ ಹಮ್ಮಿಕೊಂಡಿದೆ.
ಎಸ್‌ಎಸ್‌ಎಲ್‌ಸಿ ನಂತರ ಕಲೆ, ವಿಜ್ಞಾನ, ವಾಣಿಜ್ಯ ಸೇರಿ ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು? ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳಬಹುದು ಎಂಬ ಬಗ್ಗೆ ತಜ್ಞ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಲಿದ್ದಾರೆ.
ಚಿತ್ರದುರ್ಗದ ಎಸ್.ಆರ್.ಎಸ್. ರೆಸಿಡೆನ್ಸಿಯಲ್ ಪಿಯು ಕಾಲೇಜ್, ದೇವರಾಜ ಅರಸು ಶಿಕ್ಷಣ ಸಂಸ್ಥೆಯ ವೀನಸ್ ಅಕಾಡೆಮಿ, ವಿಶ್ವಮಾನವ ಪಿಯು ಕಾಲೇಜ್, ನಮ್ಮ ಎಕ್ಸ್‌ಪರ್ಟ್ ಕಾಂಪೊಸಿಟ್ ಪಿಯು ಕಾಲೇಜು, ಬಾಪೂಜಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ಶ್ರೀ ರಾಘವೇಂದ್ರ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ದೊಡ್ಡಸಿದ್ದವ್ವನಹಳ್ಳಿಯ ಜ್ಞಾನಪೂರ್ಣ ಪಿಯು ಕಾಲೇಜ್, ಹೊಸದುರ್ಗದ ಎಸ್.ನಿಜಲಿಂಗಪ್ಪ ಪಿಯು ಕಾಲೇಜ್, ಹೊಳಲ್ಕೆರೆಯ ವಾಗ್ದೇವಿ ಪಿಯು ಕಾಲೇಜ್, ದಾವಣಗೆರೆಯ ರಾಘವೇಂದ್ರ ಹೈಟೆಕ್ ಪಿಯು ಕಾಲೇಜ್ ಹಾಗೂ ಶ್ರೀ ಶಾರದಾ ಐಐಟಿ ಮತ್ತು ನೀಟ್ ಅಕಾಡೆಮಿ, ಸಿದ್ದಗಂಗಾ ಪಿಯು ಕಾಲೇಜ್, ಎಸ್‌ಆರ್‌ಕೆ ಅಕಾಡೆಮಿ, ಅಶ್ವಿನಿ ಮೆಡಿಕಲ್ ಮತ್ತು ಐಐಟಿ ಅಕಾಡೆಮಿ, ಶ್ರೀ ಚೈತನ್ಯ ಎಜುಕೇಷನಲ್ ಇನ್‌ಸ್ಟಿಟ್ಯೂಷನ್ಸ್ ಹಾಗೂ ಹುಬ್ಬಳ್ಳಿಯ ವಿದ್ಯಾನಿಕೇತನ ಸೈನ್ಸ್ ಪಿಯು ಕಾಲೇಜ್ ಪ್ರಾಯೋಜಕತ್ವ ವಹಿಸಿಕೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.