ADVERTISEMENT

‘ಸುಗ್ಗಿ, ಸಾಮಾಜಿಕ ಮೌಲ್ಯದ ಸಂಕೇತದ ಹಬ್ಬ ಸಂಕ್ರಾಂತಿ’

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 6:01 IST
Last Updated 15 ಜನವರಿ 2023, 6:01 IST
ಹಿರಿಯೂರಿನ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಸಂಸ್ಥೆ ಅಧ್ಯಕ್ಷ ಗಿರೀಶ್ ಧಾನ್ಯದ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಸಂಕ್ರಾಂತಿ ಹಬ್ಬಕ್ಕೆ ಚಾಲನೆ ನೀಡಿದರು.
ಹಿರಿಯೂರಿನ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಸಂಸ್ಥೆ ಅಧ್ಯಕ್ಷ ಗಿರೀಶ್ ಧಾನ್ಯದ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಸಂಕ್ರಾಂತಿ ಹಬ್ಬಕ್ಕೆ ಚಾಲನೆ ನೀಡಿದರು.   

ಹಿರಿಯೂರು: ಹಿಂದೂಗಳಿಗೆ ಸಂಕ್ರಾಂತಿ ಹೊಸ ವರ್ಷದ ಆರಂಭ ಮಾತ್ರವಾಗಿರದೆ, ಕಷ್ಟಪಟ್ಟು ಬೆಳೆದ ಧಾನ್ಯವನ್ನು ಕಣದಲ್ಲಿ ರಾಶಿ ಹಾಕಿ ಸಂಭ್ರಮಿಸುವ ಹಾಗೂ ಸಾಮಾಜಿಕ ಮೌಲ್ಯದ ಸಂಕೇತವೂ ಆಗಿದೆ ಎಂದು ನಗರದ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗಿರೀಶ್ ಹೇಳಿದರು.

ಶಾಲೆಯಲ್ಲಿ ಶನಿವಾರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಪೂಜೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮನೆಯಲ್ಲಿನ ಮಕ್ಕಳಿಗೆ ಹಿರಿಯರು ಹಬ್ಬದ ಆಚರಣೆಯ ಹಿಂದಿನ ಉದ್ದೇಶ, ಮಹತ್ವದ ಬಗ್ಗೆ ತಿಳಿಸದೇ ಹೋದರೆ ಅಂತಹ ಆಚರಣೆಗಳಿಗೆ ಅರ್ಥವಿರದು. ಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಹಲವು ವರ್ಷಗಳಿಂದ ವಿಶೇಷವಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತ ಬಂದಿದ್ದೇವೆ’ ಎಂದರು.

ADVERTISEMENT

‘ದ್ರಾವಿಡ ಆಚರಣೆಯ ಪ್ರಕಾರ ಇದು ಹೊಸವರ್ಷದ ಆರಂಭ. ಜಗತ್ತಿಗೆ ಬೆಳಕು ಕೊಡುವ, ಸರ್ವಶಕ್ತನಾದ ಸೂರ್ಯನಿಗೆ ಹಬ್ಬಕ್ಕೆಂದೇ ಮೀಸಲಿಟ್ಟಿರುವ ಮಡಕೆಯಲ್ಲಿ ಪೊಂಗಲ್ ತಯಾರಿಸಲಾಗುತ್ತದೆ. ಪೊಂಗಲ್ ಬೇಯುವಾಗ ಮಡಕೆಯಿಂದ ಉಕ್ಕಿ ಬರುವ ನೊರೆ ಪೂರ್ವ ಅಥವಾ ಉತ್ತರ ದಿಕ್ಕಿಗೆ ಚೆಲ್ಲಿದರೆ ಶುಭ ಎಂಬ ನಂಬಿಕೆ ಇದೆ. ಪೊಂಗಲ್ ನೊರೆ ಉಕ್ಕಿ ಹೊರ ಬರುವುದನ್ನು ಶಾಲೆಯ ಮಕ್ಕಳು ಕುತೂಹಲದಿಂದ ಎದುರು ನೋಡುವುದು ಖುಷಿ ಕೊಡುತ್ತದೆ. ದನಕರುಗಳು ಸೇರಿದಂತೆ ಸಾಕು ನಾಯಿಯವರೆಗೆ ಎಲ್ಲಾ ಪ್ರಾಣಿಗಳನ್ನು ಪೂಜಿಸುವುದು, ಈ ಪ್ರಾಣಿಗಳನ್ನು ಸಲಹುವವರಿಗೆ ಹೊಸಬಟ್ಟೆ ಕೊಡುವುದು ಬಹಳಷ್ಟು ಕಡೆ ವಾಡಿಕೆಯಲ್ಲಿದೆ. ಇದನ್ನೆಲ್ಲ ಮಕ್ಕಳಿಗೆ ವಿವರಿಸುವ ಮೂಲಕ ಹಬ್ಬ ಆಚರಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.