ADVERTISEMENT

ದರ್ಶನ್‌ ಜಾಮೀನು ರದ್ದು; ನ್ಯಾಯ ಸಿಗುವ ವಿಶ್ವಾಸ ಹೆಚ್ಚಾಗಿದೆ: ರೇಣುಕಸ್ವಾಮಿ ತಾಯಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 6:06 IST
Last Updated 14 ಆಗಸ್ಟ್ 2025, 6:06 IST
<div class="paragraphs"><p>ರೇಣುಕಸ್ವಾಮಿ ತಾಯಿ ರತ್ನಪ್ರಭಾ ಹಾಗೂ ನಟ ದರ್ಶನ್</p></div>

ರೇಣುಕಸ್ವಾಮಿ ತಾಯಿ ರತ್ನಪ್ರಭಾ ಹಾಗೂ ನಟ ದರ್ಶನ್

   

ಚಿತ್ರದುರ್ಗ: 'ನಟ ದರ್ಶನ್ ಅವರ ಜಾಮೀನು ರದ್ದಾಗಿರುವುದು ಸಂತಸ ತಂದಿದೆ. ನಮ್ಮ ಮಗನ ಸಾವಿಗೆ ನ್ಯಾಯ ಸಿಗುವ ವಿಶ್ವಾಸ ಹೆಚ್ಚಾಗಿದೆ' ಎಂದು ರೇಣುಕಸ್ವಾಮಿ ತಾಯಿ ರತ್ನಪ್ರಭಾ ಪ್ರತಿಕ್ರಿಯಿಸಿದರು.

ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು 'ಕೋರ್ಟ್ ಆದೇಶಕ್ಕೆ ಎಲ್ಲರೂ ತಲೆ ಬಾಗಲೇಬೇಕು, ಸುಪ್ರೀಂ ಕೋರ್ಟ್ ಆದೇಶದಿಂದ‌ ನ್ಯಾಯಾಂಗದ ಮೇಲಿನ ವಿಶ್ವಾಸ ಹೆಚ್ಚಾಗಿದೆ' ಎಂದರು.

ADVERTISEMENT

'ನಮ್ಮ ಮನೆಯವರ ಪೂಜೆಗೆ ಕೂತಾಗ ಕೋರ್ಟ್ ಆದೇಶ ಬಂದಿದೆ. ನಮಗೆ ಸಂತೋಷವಾಗಿದೆ. ನನ್ನ ಪತಿ ಪೂಜೆಗೆ ಹೊರಟಾಗಲೇ ನ್ಯಾಯ ಸಿಗುವ ವಿಶ್ವಾಸ ಇತ್ತು' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.