
ಪ್ರಜಾವಾಣಿ ವಾರ್ತೆ
ನಾಯಕನಹಟ್ಟಿ: ಹೋಬಳಿಯ ಅಬ್ಬೇನಹಳ್ಳಿ ಗ್ರಾಮದ ಗೌಡರ ಹಾಲಪ್ಪ ಅವರ ಜಮೀನಿನಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಶನಿವಾರ ರಾತ್ರಿ ಕಿಡಿಗೇಡಿಗಳು ಕತ್ತರಿಸಿದ್ದಾರೆ.
ಗೌಡರ ಹಾಲಪ್ಪ ಅವರ ಜಮೀನು ಅಬ್ಬೇನಹಳ್ಳಿ ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಇದೆ. ಹೆದ್ದಾರಿಗೆ ಹೊಂದಿಕೊಂಡು ಮನೆಯಿದ್ದು, ಮನೆಯ ಹಿಂದೆಯೇ ಜಮೀನು ಇದೆ.
15 ವರ್ಷದ ಶ್ರೀಗಂಧದ ಮರದ ಬುಡ ಕತ್ತರಿಸಿ ಸುಮಾರು 5 ಅಡಿಗಳಷ್ಟು ಶ್ರೀಗಂಧದ ತಿರುಳು (ಹಾಟ್ ವುಡ್) ಕಾಂಡವನ್ನು ಕತ್ತರಿಸಿ ಹೊತ್ತೊಯ್ದಿದ್ದಾರೆ.
ಈ ಬಗ್ಗೆ ಗೌಡರಹಾಲಪ್ಪ ಅವರ ಮಗ ಸುಪುತ್ರ ಬಾಬು ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.