ಮೊಳಕಾಲ್ಮುರಿನಲ್ಲಿ ಎಸ್‌ಟಿ ಸಮುದಾಯದ ಮುಖಂಡರು ತಹಶೀಲ್ದಾರ್‌ಗೆ ಈಚೆಗೆ ಮನವಿ ಸಲ್ಲಿಸಿದರು.
ಮೊಳಕಾಲ್ಮುರು: ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡುವ ಪ್ರಸ್ತಾವ ಖಂಡಿಸಿ ವಾಲ್ಮೀಕಿ ಮಹಾಸಭಾದ ತಾಲ್ಲೂಕು ಘಟಕದ ನೇತೃತ್ವದಲ್ಲಿ ಮಂಗಳವಾರ ಮನವಿ ಸಲ್ಲಿಸಲಾಯಿತು.
‘ಬುಡಕಟ್ಟು ಸಂಸ್ಕೃತಿ ಹಿನ್ನೆಲೆ ಹೊಂದಿರುವ ನಮ್ಮ ಜನಾಂಗವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದಿದೆ. ಈ ಸ್ಥಿತಿಯಲ್ಲಿ ಬೇರೆ, ಬೇರೆ ಜಾತಿಗಳನ್ನು ಎಸ್‌ಟಿಗೆ ಸೇರ್ಪಡೆ ಮಾಡಲಾಗಿದೆ. ಇದರಿಂದ ಸಮುದಾಯ ಅಭಿವೃದ್ಧಿ ಹೊಂದಲು ಅಡ್ಡಿಯಾಗಿದೆ’ ಎಂದು ಎಸ್‌ಟಿ ಸಮುದಾಯದ ಸದಸ್ಯರು ದೂರಿದರು.
ಎಸ್‌ಟಿಗೆ ಕುರುಬ ಸಮಾಜವನ್ನು ಸೇರಿಸುವ ಪ್ರಸ್ತಾವಕ್ಕೆ ಸರ್ಕಾರ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ನಿರ್ಲಕ್ಷ್ಯ ಮಾಡಿದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ತಹಶೀಲ್ದಾರ್ ಟಿ. ಜಗದೀಶ್ ಮನವಿ ಸ್ವೀಕರಿಸಿದರು. ಸಮುದಾಯದ ಮುಖಂಡರಾದ ಬಡೋಬನಾಯಕ, ಡಿ. ಪೆನ್ನಯ್ಯ, ಪರಮೇಶ್ವರಪ್ಪ, ಪಾಲಯ್ಯ, ಮಲ್ಲಯ್ಯ, ಓಬಯ್ಯ, ನಾಗೇಶಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.