
ಪ್ರಾತಿನಿಧಿಕ ಚಿತ್ರ
ಪುತ್ತೂರು: ‘ಜ್ಯೋತಿಷಿ ಎಂದು ಹೇಳಿಕೊಳ್ಳುತ್ತಿರುವ ದೈವ ನರ್ತಕರೊಬ್ಬರು ವಾಮಾಚಾರ ಮತ್ತು ಪ್ರೇತ ಬಾಧೆ ಇದೆ ಎಂದು ನಂಬಿಸಿ ಪರಿಹಾರದ ಹೆಸರಿನಲ್ಲಿ ನೆಕ್ಕರೆಕಾಡಿನ ಕಮಲ ಎಂಬುವರಿಂದ ಹಣ ಪಡೆದಿದ್ದಾರೆ. ಸಾಲವಾಗಿ ಪಡೆದ ₹ 2 ಲಕ್ಷವನ್ನೂ ಹಿಂತಿರುಗಿಸದೆ ವಂಚಿಸುತ್ತಿದ್ದಾರೆ. ಸುಳ್ಳು ದೂರಿನ ಮೂಲಕ ಹಾದಿ ತಪ್ಪಿಸುತ್ತಿದ್ದಾರೆ’ ಎಂದು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕ್ಕಾಡು ತಿಳಿಸಿದರು.
ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಲವು ಸಮಸ್ಯೆ ಇದ್ದುದರಿಂದ ಕಮಲ ಮತ್ತು ಅವರ ಪತಿ ಬಾಲಕೃಷ್ಣ ಅವರು ಜ್ಯೋತಿಷಿ ಮನೆಗೆ ಹೋಗಿದ್ದರು. ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿ ₹ 45 ಸಾವಿರ ಪಡೆದಿದ್ದಾರೆ. ಆ ಬಳಿಕ ಮನೆ ನಿರ್ಮಾಣದ ಹೆಸರಿನಲ್ಲಿ ₹ 2 ಲಕ್ಷ ಸಾಲ ಪಡೆದು, ಎರಡು ವರ್ಷಗಳಾದರೂ ಹಿಂತಿರುಗಿಸಿಲ್ಲ’ ಎಂದು ಆರೋಪಿಸಿದರು.
ಪ್ರಮುಖರಾದ ಯಾಮಿನಿ ಬೆಟ್ಟಂಪಾಡಿ, ವಿಮಲ ಮುಳಿಯ, ಕಮಲ, ಬಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.