ADVERTISEMENT

ಉಳ್ಳಾಲದಲ್ಲಿ ಆಂಬ್ಯುಲೆನ್ಸ್ ಹಾನಿಗೊಳಿಸಿ ಸೊತ್ತುಗಳ ಕಳವು

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 14:28 IST
Last Updated 2 ಜುಲೈ 2021, 14:28 IST
‘ಶ್ರೀ ಗಣೇಶ್ ಆಂಬುಲೆನ್ಸ್‌’ಗೆ ದುಷ್ಕರ್ಮಿಗಳು ಹಾನಿ ಮಾಡಿರುವುದು
‘ಶ್ರೀ ಗಣೇಶ್ ಆಂಬುಲೆನ್ಸ್‌’ಗೆ ದುಷ್ಕರ್ಮಿಗಳು ಹಾನಿ ಮಾಡಿರುವುದು   

ಉಳ್ಳಾಲ: ನಿಲ್ಲಿಸಿದ್ದ ಆಂಬುಲೆನ್ಸ್ ವಾಹನದ ಗಾಜು ಒಡೆದು, ಒಳಗಿದ್ದ ಪರಿಕರಗಳನ್ನು ಕಳವು ನಡೆಸಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಗಂಗಾಧರ್ ಅವರಿಗೆ ಸೇರಿದ ‘ಶ್ರೀ ಗಣೇಶ್ ಆಂಬುಲೆನ್ಸ್‌’ ವಾಹನಕ್ಕೆ ಹಾನಿ ಮಾಡಲಾಗಿದೆ. ಉಳ್ಳಾಲದ ಮುಕ್ಕಚ್ಚೇರಿ ನಿವಾಸಿ ರಹೀಂ ಎಂಬುವರು ಚಲಾಯಿಸುತ್ತಿದ್ದ ಈ ವಾಹನವನ್ನು ಗುರುವಾರ ರಾತ್ರಿ 8.30ಕ್ಕೆ ತನ್ನ ಮನೆ ಸಮೀಪ ನಿಲ್ಲಿಸಿದ್ದರು. ಬೆಳಿಗ್ಗೆ ನೋಡಿದಾಗ ಆಂಬುಲೆನ್ಸ್‌ನ ಸುತ್ತ ಗಾಜು ಒಡೆದಿರುವ ದುಷ್ಕರ್ಮಿಗಳು ಸೈರನ್ ಆಂಪ್ಲಿಫೈಯರ್, ಆಕ್ಸಿಜನ್ ರೆಗ್ಯುಲೇಟರ್ , ಪಿಪಿಇ ಕಿಟ್‌ಗಳನ್ನು ಹೊರೆಗೆಸೆದು ದಾಂದಲೆ ನಡೆಸಿದ್ದಾರೆ.

‘ಕೋವಿಡ್‌ ಸೋಂಕಿತರ ಸೇವೆಯಲ್ಲಿ ದಿನದ 24 ಗಂಟೆಗಳ ಕಾಲ ‘ಶ್ರೀ ಗಣೇಶ್ ಆಂಬ್ಯುಲೆನ್ಸ್’ ತೊಡಗಿಸಿಕೊಂಡಿದೆ. ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತರಾದ ಹಲವರ ಶವ ಸಾಗಣೆಗೂ ಈ ವಾಹನವನ್ನು ಬಳಸಲಾಗುತ್ತಿತ್ತು. ಇಂತಹ ಸೇವೆಯಲ್ಲಿ ತೊಡಗಿಸಿಕೊಂಡಿರುವ ವಾಹನಕ್ಕೆ ಹಾನಿ ಮಾಡಿದವರು ಸಾಮಾನ್ಯ ವಾಹನವನ್ನು ಬಿಡುತ್ತಾರೆಯೇ’ ಎಂದು ಗಂಗಾಧರ್ ಅವರ ಪುತ್ರ ಪಚ್ಚು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ವಿಡಿಯೊ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.