ADVERTISEMENT

ಕರಾವಳಿ: ಸಂಗೀತ ಸೇವೆಯ 'ಗೀತಾ ತುಂಗ'

ಸಂಗೀತ, ಸಾಂಸ್ಕೃತಿಕ, ಜಾನಪದ ಕಲೆಗಳಿಗೆ ಕೊಡುಗೆ

ಎ.ಶೇಷಗಿರಿ ಭಟ್ಟ‌
Published 29 ಜನವರಿ 2020, 19:30 IST
Last Updated 29 ಜನವರಿ 2020, 19:30 IST
ಸನ್ಮಾನ ಸ್ವೀಕರಿಸುತ್ತಿರುವ ಗೀತಾ ತುಂಗ
ಸನ್ಮಾನ ಸ್ವೀಕರಿಸುತ್ತಿರುವ ಗೀತಾ ತುಂಗ   

ಭಾರತ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಸಂಗೀತ, ಸಾಂಸ್ಕೃತಿಕ, ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅನೇಕರು ಕೆಲಸ ಮಾಡುತ್ತಿರುವುದು ನಮಗೆಲ್ಲ ತಿಳಿದಿರುವ ವಿಷಯ. ಅದರಲ್ಲೂ ಅನೇಕ ಮಹಿಳೆಯರು ತಮ್ಮ ಬಿಡುವಿನ ಸಮಯದಲ್ಲಿ ಸಂಗೀತ, ಕ್ರಾಫ್ಟ್, ನರ್ಸರಿ, ಶಿಕ್ಷಣ ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಂಡು ನಮ್ಮ ಮುಂದಿನ ಪೀಳಿಗೆಗೆ ದಾರಿದೀಪವಾಗಿದ್ದಾರೆ. ಸಾಲಿಗ್ರಾಮದ ಗೀತಾ ತುಂಗ ಅಂತಹ ಮಹಿಳೆಯರಲ್ಲಿ ಒಬ್ಬರು.

ಗೀತಾ ತುಂಗ ಅವರು ಕಳೆದ 32 ವರ್ಷದಿಂದ ಬ್ರಹ್ಮಾವರ ಮತ್ತು ಸಾಲಿಗ್ರಾಮದಲ್ಲಿ ಉಚಿತ ಸಂಗೀತ ತರಗತಿಗಳನ್ನು ನಡೆಸುತ್ತಿದ್ದು, ಅನೇಕ ಸಂಗೀತಗಾರರನ್ನು ಸಮಾಜಕ್ಕೆ ನೀಡಿದ್ದಾರೆ. ಬ್ರಹ್ಮಾವರದ ಉದ್ಯಮಿ ಹಾಗೂ ಸಂಗೀತಗಾರರಾಗಿದ್ದ ದಿ.ರಾಮ ಶೆಟ್ಟಿಗಾರ್ ಅವರ ತ್ಯಾಗರಾಜ ಸಂಗೀತ ಶಾಲೆಯಲ್ಲಿ ಸಂಗೀತಾಭ್ಯಾಸ ಮಾಡಿದ್ದರು. ಅವರ ಕಾಲಾನಂತರಅದೇ ಸಂಗೀತ ಶಾಲೆಯಲ್ಲಿ ಸಂಗೀತ ಗುರುವಾಗಿ ಉಚಿತವಾಗಿ ಸಂಗೀತವನ್ನು ಧಾರೆ ಎರೆಯುತ್ತಿದ್ದಾರೆ.

ಬ್ರಹ್ಮಾವರ ಸುತ್ತಮುತ್ತಲಿನ ಗ್ರಾಮೀಣ ಭಾಗದ ಸಂಗೀತಾಸಕ್ತರಿಗೆ ಮತ್ತು ಸಾಲಿಗ್ರಾಮದಲ್ಲಿರುವ ತಮ್ಮ ಮನೆಯಲ್ಲಿಯೇ ಪ್ರತಿ ಶನಿವಾರ ಮತ್ತು ಭಾನುವಾರ ಕರ್ನಾಟಕ ಸಂಗೀತ ಕಲಿಸಿಕೊಡುತ್ತಿದ್ದಾರೆ. ಅಲ್ಲದೇ, ಪ್ರೌಢಶಿಕ್ಷಣ ಇಲಾಖೆಯಿಂದ ನಡೆಸಲಾಗುವ ಸಂಗೀತದ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆ
ಗಳನ್ನು ಬರೆಯಲು ಪ್ರೋತ್ಸಾಹಿಸುತ್ತಿದ್ದಾರೆ. ಇಲಾಖೆ ನಡೆಸುವ ಪರೀಕ್ಷೆಗೆ ಕಳೆದ 11 ವರ್ಷದಿಂದ ಪರೀಕ್ಷಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ADVERTISEMENT

ಪರಿಸರದ ಶಾಲೆಗಳಲ್ಲಿ ವಾರ್ಷಿಕೋತ್ಸವ, ಹಲವು ಭಜನಾ ತಂಡಗಳ ಕಾರ್ಯಕ್ರಮಗಳಲ್ಲಿ ಹಾಡುಗಾರಿಕೆ
ಯೊಂದಿಗೆ ಹಾರ್ಮೋನಿಯಂನ ಹಿನ್ನೆಲೆ ಸಂಗೀತ ನೀಡುವುದರಲ್ಲಿಯೂ ನಿಸ್ಸೀಮರಾದ ಇವರು,
ಹಲವು ವರ್ಷಗಳಿಂದಪ್ರತಿಭಾ ಕಾರಂಜಿ ಮತ್ತು ಸ್ಪರ್ಧಾ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಸಹಕರಿಸುತ್ತಿ
ದ್ದಾರೆ.ಶೈಕ್ಷಣಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಬಡ ಮಕ್ಕಳಿಗೆ ಮಮತೆಯ ಅಂತಃಕರಣ ತೋರಿಸುತ್ತಾ ಗ್ರಾಮೀಣ ಸಂಗೀತ ಆಸಕ್ತರಿಗೆ ಉಚಿತವಾಗಿ ಸಂಗೀತಾಭ್ಯಾಸ ನೀಡುತ್ತಿದ್ದಾರೆ.

ಪ್ರಾಚೀನ ಕಲಾ ಶಿಕ್ಷಣಕ್ಕೆ ಮರುಜೀವ ನೀಡುವ ಕಾರ್ಯ ಮಾಡುತ್ತಿರುವ ಗೀತಾ ತುಂಗ ಆದರ್ಶಪ್ರಾಯರಾಗಿದ್ದಾರೆ. ಹೆಚ್ಚಿನ ಮಾಹಿತಿಗೆ (ಮೊ.9964213639)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.