
ಬಂಟ್ವಾಳ: 2 ತಿಂಗಳಿನಿಂದ ವೇತನ ನೀಡದೆ ಹೊರಗುತ್ತಿಗೆ ನೌಕರರ ಬದುಕಿನಲ್ಲಿ ಪುರಸಭೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿ ಪುರಸಭೆ ಎದುರು 58 ಮಂದಿ ಹೊರಗುತ್ತಿಗೆ ನೌಕರರು ಬುಧವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಕೆ.ಬಿ. ಅವರು ಪ್ರತಿಭಟನಕಾರರೊಂದಿಗೆ ಮಾತನಾಡದೆ ತನ್ನ ಕಚೇರಿಯೊಳಗೆ ತೆರಳಿದ್ದು, ನೌಕರರ ಅಸಮಾಧಾನಕ್ಕೆ ಕಾರಣವಾಯಿತು.
ಪುರಸಭೆ ಮಾಜಿ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಮಹಮ್ಮದ್ ಶರೀಫ್, ಸದಸ್ಯರಾದ ಎ.ಗೋವಿಂದ ಪ್ರಭು, ಹರಿಪ್ರಸಾದ್, ವಿದ್ಯಾವತಿಪ್ರಮೋದ್ ಕುಮಾರ್, ಮೀನಾಕ್ಷಿ ಗೌಡ, ಶಶಿಕಲಾ, ದೇವಕಿ, ರೇಖಾ ಪೈ, ಮಾಜಿ ಸದಸ್ಯ ಗಂಗಾಧರ ಪೂಜಾರಿ, ಪ್ರೇಮನಾಥ್, ಸಮ್ಮದ್, ವಿಶ್ವನಾಥ ಗೌಡ ಮಣಿ, ವಿಶ್ವನಾಥ ಚೆಂಡ್ತಿಮಾರ್ ಬೆಂಬಲಕ್ಕೆ ನಿಂತು ಮುಖ್ಯಾಧಿಕಾರಿ ಜೊತೆಗೆ ಸಂಧಾನ ಮಾತುಕತೆ ನಡೆಸಿದರು.
ಜಿಲ್ಲಾಧಿಕಾರಿ ನಿರ್ದೇಶನದಂತೆ ನೌಕರರ ಪ್ರಸ್ತಾವನೆ ಬಗ್ಗೆ ಅವರಿಗೆ ಕಳುಹಿಸಿ ಮಂಜೂರಾತಿ ದೊರಕಿದ ಕೂಡಲೇ ವೇತನ ಪಾವತಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.