ADVERTISEMENT

ಮಂಗಳೂರು ಶಾಸಕ ಭರತ್‌ ಶೆಟ್ಟಿಗೆ ಕೋವಿಡ್ ದೃಢ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 13:49 IST
Last Updated 2 ಜುಲೈ 2020, 13:49 IST
ಡಾ.ವೈ.ಭರತ್ ಶೆಟ್ಟಿ
ಡಾ.ವೈ.ಭರತ್ ಶೆಟ್ಟಿ   

ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರಿಗೆ ಕೋವಿಡ್-19 ದೃಢವಾಗಿದೆ.

ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕೆಲವು ದಿನಗಳಿಂದ ಚಿಕಿತ್ಸೆಯಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

'ನನಗೆ ಕೋವಿಡ್-19 ದೃಢಪಟ್ಟಿದೆ. ನಿಮ್ಮೆಲ್ಲರ ಶುಭ ಹಾರೈಕೆಗಳಿಂದ ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಮುಂದೆಯೂ ಕೆಲ ದಿನಗಳು ಚಿಕಿತ್ಸೆ ಪಡೆದುಕೊಳ್ಳಬೇಕಾಗಬಹುದು. ಎಲ್ಲರೂ ಅಂತರ ಕಾಪಾಡಿಕೊಳ್ಳಬೇಕು, ಮನೆಯಿಂದ ಹೊರಗೆ ಬರುವಾಗಮಾಸ್ಕ್ ಧರಿಸಬೇಕು ಮತ್ತು ಕೈಗಳನ್ನು ಪದೇಪದೆ ತೊಳೆದುಕೊಳ್ಳಬೇಕು ಎಂದು ವಿನಂತಿಸುತ್ತೇನೆ. ನಿಮ್ಮ ಬಗ್ಗೆ ಮತ್ತು ನಿಮ್ಮ ಆಪ್ತರ ಬಗ್ಗೆ ಕಾಳಜಿ ವಹಿಸಿ' ಎಂದು ಭರತ್ ಶೆಟ್ಟಿ ವಿನಂತಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.