ADVERTISEMENT

ಮೂಡುಬಿದಿರೆ: 23ನೇ ಬಾರಿ ಆಳ್ವಾಸ್ ಸಮಗ್ರ ಚಾಂಪಿಯನ್ಸ್

45ನೇ ಮಂಗಳೂರು ವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 6:41 IST
Last Updated 28 ನವೆಂಬರ್ 2025, 6:41 IST
45ನೇ ಮಂಗಳೂರು ವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್ ತಂಡ ಸಮಗ್ರ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿತು 
45ನೇ ಮಂಗಳೂರು ವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್ ತಂಡ ಸಮಗ್ರ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿತು    

ಮೂಡುಬಿದಿರೆ: ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಉಡುಪಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ನ.24ರಿಂದ 26ರವರೆಗೆ ನಡೆದ ಮಂಗಳೂರು ಅಂತರ ಕಾಲೇಜು ಮಟ್ಟದ ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಕಾಲೇಜು ತಂಡ 23ನೇ ಬಾರಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ.

ಆಳ್ವಾಸ್ ತಂಡವು ಪುರುಷರ ವಿಭಾಗದಲ್ಲಿ 265, ಮಹಿಳೆಯರ ವಿಭಾಗದಲ್ಲಿ 207 ಅಂಕ ಸೇರಿ ಒಟ್ಟು 472 ಅಂಕ ಗಳಿಸಿತು. 42 ಚಿನ್ನ, 25 ಬೆಳ್ಳಿ, 4 ಕಂಚು ಸೇರಿ 71 ಪದಕ ಗಳಿಸಿ ಸಮಗ್ರ ತಂಡ ಪ್ರಶಸ್ತಿ ಗೆದ್ದುಕೊಂಡಿತು.

ಆಳ್ವಾಸ್‌ನ ಕ್ರೀಡಾಪಟುಗಳು 6 ನೂತನ ಕೂಟ ದಾಖಲೆ ನಿರ್ಮಿಸಿದರು. ಅನಿಕೇತ್ ಶಾಟ್‌ಪಟ್‌ನಲ್ಲಿ, ನಾಗೇಂದ್ರ ಅಣ್ಣಪ್ಪ ನಾಯ್ಕ್ ಡಿಸ್ಕಸ್‌ ಥ್ರೋ, ಕೃಷಿಕ್ ಎಂ. 110 ಹರ್ಡಲ್ಸ್, ನಿಧಿ ಯಾದವ್ ಹ್ಯಾಮರ್ ಥ್ರೋ, 4X400 ರಿಲೆ ಪುರುಷರ ತಂಡ ನೂತನ ದಾಖಲೆಗಳನ್ನು ಮಾಡಿದೆ.

ADVERTISEMENT

ಆಳ್ವಾಸ್‌ನ ದೀಕ್ಷಿತ ರಾಮಕೃಷ್ಣ ಗೌಡ ಅವರು ಮಹಿಳಾ ವಿಭಾಗದ ಬೆಸ್ಟ್ ಅಥ್ಲೀಟ್ ಆಗಿ ಹೊರಹೊಮ್ಮಿದರು. ಮಂಗಳೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ 47 ಸ್ಪರ್ಧೆಗಳಲ್ಲಿ 47 ಕೂಟ ದಾಖಲೆಗಳು ಆಳ್ವಾಸ್ ಕಾಲೇಜಿನ ಹೆಸರಿನಲ್ಲಿದೆ ಎಂದು ಆಳ್ವಾಸ್ ಕಾಲೇಜು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.