ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹ ಪತ್ತೆಗಾಗಿ ಜಾಗ ಅಗೆಯುವ ಕಾರ್ಯ ಗುರುವಾರ ಸತತ ಮೂರನೇ ದಿನವೂ ಮುಂದುವರಿಯಿತು.
ಎಸ್ಐಟಿ ತಂಡದ ಜೊತೆ ಸುಮಾರು 20 ಕಾರ್ಮಿಕರು ನೇತ್ರಾವತಿ ನದಿ ಪಕ್ಕದ ಕಾಡಿನ ಒಳಗೆ ತೆರಳಿದ್ದಾರೆ.
ಈ ಪ್ರಕರಣದ ಸಾಕ್ಷಿ ದೂರುದಾರ ತೋರಿಸಿದ್ದ 13 ಜಾಗಗಳಲ್ಲಿ ನೇತ್ರಾವತಿ ನದಿ ಪಕ್ಕದ ದಟ್ಟ ಕಾಡಿನ ಒಳಗೆ ತೋರಿಸಿದ್ದ ಐದು ಕಡೆ ಈಗಾಗಲೇ ನೆಲವನ್ನು ಅಗೆಯಲಾಗಿದೆ.
ಮೃತದೇಹಗಳನ್ನು ಹೂತು ಹಾಕಿದ ಕುರುಹುಗಳು ಎಲ್ಲೂ ಪತ್ತೆಯಾಗಿರಲಿಲ್ಲ.
ದೂರುದಾರ ತೋರಿಸಿದ ಆರನೇ ಜಾಗದಲ್ಲಿ ಆತನ ಸಮ್ಮುಖದಲ್ಲೆ ನೆಲ ಅಗೆಯುವ ಈಗ ನಡೆಯುತ್ತಿದೆ. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ , ಎಸ್ಐಟಿಯ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸ್ಥಳದಲ್ಲಿದ್ದು ಮಾರ್ಗದರ್ಶನ ಮಾಡುತ್ತಿದ್ದಾರೆ.
ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಹಾಗೂ ಡಿಐಜಿ ಎಂ.ಎನ್.ಅನುಚೇತ್ ಅವರೂ ಸ್ಥಳಕ್ಕಾಗಮಿಲಿದ್ದಾರೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ನೆಲ ಅಗೆಯುತ್ತಿದ್ದಂತೆ ನೀರಿನ ಒಸರು ಬರುತ್ತಿದೆ. ನೀರನ್ನು ತೆರವುಗೊಳಿಸಲು ಡೀಸೆಲ್ ಪಂಪ್ ಬಳಸಲಾಗುತ್ತಿದೆ. ನೆಲ ಅಗೆಯುವ ಯಂತ್ರವನ್ನೂ ಕಾಡಿನೊಳಗೆ ಒಯ್ಯಲಾಯಿತು.
ನೀರು ಮೇಲೆಕ್ಕತ್ತಲು ಪೈಪ್ ಹಾಗೂ ನೆಲ ಅಗೆಯುವ ಯಂತ್ರವನ್ನು ನೇತ್ರಾವತಿ ಪಕ್ಕದ ಕಾಡಿನೊಳಗೆ ಗುರುವಾರ ಒಯ್ಯಲಾಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.