
ಮೂಲ್ಕಿ: ಎಕ್ಕಾರಿನಲ್ಲಿ ಹರಿಯುವ ನಂದಿನಿ ನದಿಯ ಮಡಿವಾಳ ಕಟ್ಟೆಗೆ ಎಕ್ಕಾರಿನ ವಿಜಯ ಯುವ ಸಂಗಮದ ಸದಸ್ಯರು ಅಣೆಕಟ್ಟು ಹಲಗೆ ಹಾಕಿಸುವ ಕಾರ್ಯ ಮಾಡಿದ್ದಾರೆ.
ಈ ಬಗ್ಗೆ ವಿಜಯ ಸಂಗಮದ ಅಧ್ಯಕ್ಷ ಪ್ರವೀಣ್ ಕೆ.ಎಂ.ಪ್ರತಿಕ್ರಿಯಿಸಿ, ವಿಶೇಷವಾಗಿ ಶ್ರಮದಾನದಿಂದ ಹೂಳನ್ನು ತೆಗೆದಿದ್ದು, ಸುವ್ಯವಸ್ಥಿತವಾದ ಕಾಲುವೆಯ ಕೆಲಸವನ್ನು ಸಮರ್ಪಕವಾಗಿ ವಿಜಯ ಯುವ ಸಂಗಮದ ಸದಸ್ಯರು ಮಾಡಿದ್ದರಿಂದ ಕೃಷಿ ಭೂಮಿಗೆ ಈಗ ಅಣೆಕಟ್ಟಿನ ನೀರು ಹರಿಯುವಂತಾಗಿದೆ. ಇದರಿಂದ ಉತ್ತಮ ಅಂತರ್ಜಲ ವೃದ್ಧಿಯಾಗಿದ್ದು ಕುಡಿಯುವ ನೀರಿನ ಬಾವಿ, ಕೃಷಿ ನೀರಾವರಿ ಬಾವಿಗಳು ಬೇಸಗೆ ಕಾಲದಲ್ಲೂ ಬತ್ತದೆ ಉಳಿಯುವಂತಾಗಿದೆ. ಬಡಕರೆ, ತಾಂಗಾಡಿ, ನಡ್ಯೋಡಿ ಭಾಗದ ಜನರು ಈ ಅಣೆಕಟ್ಟು ನೀರಿನ ಫಲಾನುಭವಿಗಳಾಗಿದ್ದು ಬಹುಜನಪಯೋಗಿ ವ್ಯವಸ್ಥೆ ಇದಾಗಿದೆ ಎಂದರು.
ಈ ವೇಳೆ ರತ್ನಾಕರ ಶೆಟ್ಟಿ ಬಡಕರೆಬಾಳಿಕೆ, ಸಿರಿಕುರಲ್ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕ ಮುರ ಸದಾಶಿವ ಶೆಟ್ಟಿ, ಶಿವದಾಸ ಭಟ್ ರಾಜಮಂದಿರ, ಸಂಗಮದ ಸದಸ್ಯರು, ಎಕ್ಕಾರು ಗ್ರಾಮ ಪಂಚಾಯಿತಿ ಸದಸ್ಯ ವಿಕ್ರಮ್ ಮಾಡ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.