
ಮೂಲ್ಕಿ: ಸೌಹಾರ್ದ ಸಾರುವ ಕ್ರಿಸ್‌ಮಸ್ ಸಂಭ್ರಮವನ್ನು ಸಾಮೂಹಿಕವಾಗಿ ಆಚರಿಸುವ ಪ್ರಯತ್ನ ಶ್ಲಾಘನೀಯ. ವಿದ್ಯಾರ್ಥಿಗಳಿಗೆ ಈ ಬಗ್ಗೆ ತಿಳಿಹೇಳುವ ಮೂಲಕ ಹೊಸತನ ಮೂಡಿಸಬೇಕು. ನಮ್ಮಲ್ಲಿನ ಭಾವನೆಗಳನ್ನು ಪ್ರತಿಬಿಂಬಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು
ಯುಬಿಎಂಸಿ ಜಿಲ್ಲಾ ಚರ್ಚ್ ಬೋರ್ಡ್ ಮಾಜಿ ಅಧ್ಯಕ್ಷ ಜಯಪ್ರಕಾಶ್ ಸೈಮನ್ ಹೇಳಿದರು.
ಮೂಲ್ಕಿ ಬಳಿಯ ಹಳೆಯಂಗಡಿಯ ಭಾರತದ ಕ್ರೈಸ್ತ ಚರ್ಚ್‌ಗಳ ಒಕ್ಕೂಟ ಹಾಗೂ ವಿಜಯ ಮಾಸ್ಟರ್ ಟ್ರಸ್ಟ್ ಹಳೆಯಂಗಡಿಯ ಸಹಯೋಗದಲ್ಲಿ ಹಳೆಯಂಗಡಿ ಯುಬಿಎಂಸಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಕ್ರಿಸ್‌ಮಸ್ ಹಾಡುಗಳ ಅಂತರಕಾಲೇಜು ಸ್ವರ್ಧೆಯ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಿಎಸ್‌ಐನ ಬಿಷಪ್ ಹೇಮಚಂದ್ರ ಕುಮಾರ್ ಸ್ಪರ್ಧೆಗೆ ಚಾಲನೆ ನೀಡಿದರು.
ಭಾರತದ ಕ್ರೈಸ್ತ ಚರ್ಚ್‌ಗಳ ಒಕ್ಕೂಟದ ಅಧ್ಯಕ್ಷ ಡೇನಿಯಲ್ ದೇವರಾಜ್ ವಿಜೇತರಿಗೆ ನಗದು ಸಹಿತ ಪ್ರಶಸ್ತಿ ಫಲಕ ವಿತರಿಸಿದರು.
ನಿವೃತ್ತ ಬಿಷಪ್ ಮೋಹನ್ ಮನೋರಾಜ್, ಧಾರ್ಮಿಕ ಚಿಂತಕ ವಾದಿರಾಜ ಉಪಾಧ್ಯಾಯ, ಧಾರ್ಮಿಕ ಗುರುಗಳಾದ ಪಿ.ಎ.ಅಬ್ದುಲ್ಲಾ ಝೈನಿ ಬಡಗನೂರು, ಆಂಟನಿ ಶೆರಾ ಮೂಲ್ಕಿ, ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ, ಹ್ಯಾಂಡ್ಲಿ ಸೈಮನ್, ತೀರ್ಪುಗಾರರಾದ ಹರಿಣಿ ಸುಶಾಂತಿ ಬಂಗೇರ, ವ್ಯಾಲೆಟೀನಾ ಪ್ರೆಸಿಲ್ಡಾ ಕರ್ಕಡ, ರೀಟಾ ಶರಲ್, ರೇಶ್ಮಾ ಡಿಸೋಜ, ಪ್ರಮುಖರಾದ ಐಸನ್ ಪಾಲನ್ನ, ಸೆಬಾಸ್ಟಿಯನ್ ಜತ್ತನ್ನ, ಶಶಿಕಲಾ ಅಂಚನ್, ಅಮೃತರಾಜ್ ಕೋಡೆ, ಸಂಧ್ಯಾ ಸುಪ್ರೀತಾ, ವಿನಯಲಾಲ್ ಬಂಗೇರಾ, ರಾಹುಲ್ ಕರ್ಕಡ ಪಡುಹಿತ್ಲು ಭಾಗವಹಿಸಿದ್ದರು.
ವಕೀಲ ಅಕ್ಬರ್ ನಿರೂಪಿಸಿದರು.
ಫಲಿತಾಂಶ: ಸೇಂಟ್ ಆನ್ಸ್ ನರ್ಸಿಂಗ್ ಕಾಲೇಜು ಮೂಲ್ಕಿ (ಪ್ರ), ಸೇಂಟ್ ಆಲೋಶಿಯಸ್ ಕಾಲೇಜು, ಮಂಗಳೂರು ಮತ್ತು ಪಾಂಪೈ ಕಾಲೇಜು ಐಕಳ (ದ್ವಿ), ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ (ತೃ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.