
ಮಂಗಳೂರು: ಭಾರತೀಯ ಇತಿಹಾಸವು ಪುರುಷ ಕಲಾವಿದರು ಸ್ತ್ರೀ ಪಾತ್ರಗಳನ್ನು ಅಭಿನಯಿಸುವ ದೀರ್ಘಕಾಲದ ಸಂಪ್ರದಾಯವನ್ನು ತಿಳಿಸುತ್ತದೆ. ಇದು ಮಹಿಳೆಯರು ಸಾರ್ವಜನಿಕವಾಗಿ ಪ್ರದರ್ಶನ ನೀಡುವುದರ ಮೇಲಿನ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ನಿರ್ಬಂಧಗಳನ್ನು ಅಭಿವ್ಯಕ್ತಿಸುತ್ತದೆ ಎಂದು ಕಲಾವಿದೆ ಶ್ರುತಿ ಬಂಗೇರ ಹೇಳಿದರು.
ಇಂಟಾಕ್‌ನ ಮಂಗಳೂರು ವಿಭಾಗವು ಆರ್ಟ್ ಕೆನರಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಂಪರೆಯ ಸಪ್ತಾಹದ ಮೂರನೇ ದಿನದ ಕಾರ್ಯಕ್ರಮದಲ್ಲಿಅವರು ‘ಯಕ್ಷಗಾನದಲ್ಲಿ ಸ್ತ್ರೀವೇಷ: ಭಾರತೀಯ ನೃತ್ಯನಾಟಕಗಳಲ್ಲಿ ಸ್ತ್ರೀ ವೇಷಧಾರೆಯ ಸಂಪ್ರದಾಯ’ ಈ ಕುರಿತು ಮಾತನಾಡಿದರು.
‘ಕಥಕ್ಕಳಿ, ಕೂಚುಪುಡಿ, ಯಕ್ಷಗಾನ ಹೀಗೆ ಹಲವು ಕಲಾಪ್ರಕಾರಗಳಲ್ಲಿ ಮಹಿಳೆಯರಿಗೆ ವೇದಿಕೆ ನಿರ್ಬಂಧ ಇದ್ದ ಕಾರಣ, ಪುರುಷರು ಸ್ತ್ರೀಪಾತ್ರಗಳನ್ನು ಪ್ರತಿನಿಧಿಸುವುದು ಅಗತ್ಯವಾಯಿತು ಎಂದರು. ಸ್ತ್ರೀವೇಷ ಕಲಾವಿದರು ಎದುರಿಸುವ ಸಾಮಾಜಿಕ ಮತ್ತು ಮಾನಸಿಕ ಸವಾಲುಗಳನ್ನು ಅವರು ತಿಳಿಸಿದರು.
ದೀಕ್ಷಿತ್ ಆರ್. ಪೈ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.