ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ದುರ್ಗಾಪರಮೇಶ್ವರಿ ಜಾತ್ರೆ ಅದ್ಧೂರಿಯಿಂದ ನಡೆಯಿತು. ಜಾತ್ರೆಯ ಪ್ರಮುಖ ಆಕರ್ಷಣೆಯಾದ ‘ಅಗ್ನಿಕೇಳಿ’ ವ್ರತಾಚರಣೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು. ‘ತೂಟೆದಾರ ಸೇವೆ’ ಎಂದೇ ಪ್ರಸಿದ್ಧಿಯಾದ ಈ ಅಗ್ನಿಕೇಳಿ ನಡೆದಿದ್ದು ಕಟೀಲು ಬಳಿಯ ಅತ್ತೂರು ಮತ್ತು ಕೊಡೆತ್ತೂರು ಮಾಗಣೆಗಳ ಗ್ರಾಮಸ್ಥರ ಮಧ್ಯೆ. ಇದಕ್ಕೂ ಮುನ್ನ, ಮೇಷ ಸಂಕ್ರಮಣದಂದು ಧ್ವಜಾರೋಹಣದೊಂದಿಗೆ ಎಂಟು ದಿನಗಳ ಕಟೀಲು ವರ್ಷಾವಧಿ ಜಾತ್ರೆಗೆ ಚಾಲನೆ ದೊರೆತಿತ್ತು. ಶನಿವಾರ ರಾತ್ರಿ ಶಯನೋತ್ಸವ ಜರುಗಿತು. ಭಾನುವಾರ ಸಂಜೆ ಶ್ರೀದೇವಿಯ ಸವಾರಿಗಳು ನಡೆದವು. ದೇವಸ್ಥಾನದ ಆವರಣದಲ್ಲಿ ನಡೆದ ಬ್ರಹ್ಮರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.