ADVERTISEMENT

ಮಂಗಳೂರು: ಬಂದೂಕು ತೋರಿಸಿ ಬ್ಯಾಂಕ್‌ನಿಂದ ಚಿನ್ನ- ನಗದು ದರೋಡೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 9:13 IST
Last Updated 17 ಜನವರಿ 2025, 9:13 IST
<div class="paragraphs"><p>ದರೋಡೆ ನಡೆದ ಬ್ಯಾಂಕ್‌ ಮುಂದೆ ಸೇರಿರುವ ಜನ</p></div>

ದರೋಡೆ ನಡೆದ ಬ್ಯಾಂಕ್‌ ಮುಂದೆ ಸೇರಿರುವ ಜನ

   

–ಪ್ರಜಾವಾಣಿ ಚಿತ್ರ

ಉಳ್ಳಾಲ (ದಕ್ಷಿಣ ಕನ್ನಡ): ಕೋಟೆಕಾರು‌ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ (ಕೋಟೆಕಾರು ಬ್ಯಾಂಕ್) ಮಧ್ಯಾಹ್ನ 11.30ರಿಂದ 12.30ರ ನಡುವಿನ ಅವಧಿಯಲ್ಲಿ ಐದು ಮಂದಿ ಮುಸುಕುಧಾರಿಗಳು ಬ್ಯಾಂಕ್ ಸಿಬ್ಬಂದಿಗೆ ಬಂದೂಕು ತೋರಿಸಿ ಚಿನ್ನಾಭರಣ, ನಗದು ಹೊತ್ತೊಯ್ದಿದ್ದಾರೆ.

ADVERTISEMENT

ದರೋಡೆಕೋರರ ಕೈಯಲ್ಲಿ ಬಂದೂಕು, ತಲವಾರು, ಚಾಕು ಹಿಡಿದಿದ್ದರು. ಈ ವೇಳೆ ಬ್ಯಾಂಕ್ ನಲ್ಲಿ ನಾಲ್ಕೈದು ಸಿಬ್ಬಂದಿ ಕೆಲಸ‌ ಮಾಡುತ್ತಿದ್ದರು. ಸಿಬ್ಬಂದಿಗೆ ಬಂದೂಕು ತೋರಿಸಿ ಲಾಕರ್ ಬಾಗಿಲು ತೆಗೆದಿಸಿದ ದರೋಡೆಕೋರರು ಚಿನ್ನ, ನಗದನ್ನು ಚೀಲದಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಕಳವಾದ ಚಿನ್ನಾಭರಣ, ನಗದು ಅಂದಾಜು ₹ 10-12 ಕೋಟಿ ಇರಬಹುದು ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್‌ ಅಗ್ರವಾಲ್ ತಿಳಿಸಿದ್ದಾರೆ.

ದರೋಡೆಕೋರರು ಹಿಂದಿನಲ್ಲಿ ಮಾತನಾಡುತ್ತಿದ್ದರು ಎಂದು ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ದರೋಡೆಕೋರರ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.‌

ಬ್ಯಾಂಕ್ ನ ಕೆಳಗಿನ ಮಹಡಿಯಲ್ಲಿರುವ ಬೇಕರಿಯಲ್ಲಿದ್ದ ಕೆಲ ವಿದ್ಯಾರ್ಥಿಗಳು ‌ಸಿಬ್ಬಂದಿ ಕೂಗಿಕೊಳ್ಳುವುದನ್ನು ಕೇಳಿ ಅತ್ತ ಓಡಿದಾಗ, ದರೋಡೆಕೋರರು ಅವರನ್ನು ಬೆದರಿಸಿದ್ದಾರೆ. ವಿದ್ಯಾರ್ಥಿಗಳ ಬಳಿ ಅವರು ಕನ್ನಡದಲ್ಲಿ ಮಾತನಾಡಿದ್ದರೆ, ಬ್ಯಾಂಕ್ ಸಿಬ್ಬಂದಿ ಬಳಿ ಹಿಂದಿಯಲ್ಲಿ ಮಾತನಾಡಿದ್ದಾರೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.