ADVERTISEMENT

DNA ಮೂಲಕ ಗುರುತು ಪತ್ತೆ: ಹೂತಿದ್ದ ಮೃತದೇಹ ಹೊರತೆಗೆದು ಕುಟುಂಬಕ್ಕೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 13:55 IST
Last Updated 4 ಫೆಬ್ರುವರಿ 2025, 13:55 IST
ಉಮರ್ ಫಾರೂಕ್
ಉಮರ್ ಫಾರೂಕ್   

ಬೆಳ್ತಂಗಡಿ: ಗೇರುಕಟ್ಟೆ ತೋಟದ ಕೆರೆಯಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವ ಪ್ರಕರಣದಲ್ಲಿ ಡಿಎನ್ಎ ಮೂಲಕ ಮೃತ ವ್ಯಕ್ತಿಯ ಗುರುತನ್ನು ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿದ್ದು, ಉಪ ವಿಭಾಗಾಧಿಕಾರಿ ಹಾಗೂ ಪೊಲೀಸರ ಸಮ್ಮುಖದಲ್ಲಿ ಹೂತಿದ್ದ ಮೃತದೇಹವನ್ನು ಹೊರತೆಗೆದು ಮಂಗಳವಾರ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು. 

ಕುಟುಂಬಸ್ಥರು ಮೃತದೇಹ ತೆಗೆದುಕೊಂಡು ಹೋಗಿ ಪರಪ್ಪು ಮಸೀದಿಯಲ್ಲಿ ಸಂಪ್ರದಾಯದಂತೆ ದಫನ ಕಾರ್ಯ ನಡೆಸಿದರು.

ಪುತ್ತೂರು ಉಪ ವಿಭಾಗಾಧಿಕಾರಿ ಶ್ರವಣ್ ಕುಮಾರ್, ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಂ, ಪ್ರೋಪೆಷನರಿ ಐಪಿಎಸ್ ಮನಿಷಾ ಮನೋಹಿ, ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್‌ ಸುಬ್ಬಾಪೂರ ಮಠ, ಬೆಳ್ತಂಗಡಿ ತಾಲ್ಲೂಕು ಆರೋಗ್ಯಾಧಿಕಾರಿ ಸಂಚಿತ್ ಹೆಗ್ಡೆ, ಕಂದಾಯ ನಿರೀಕ್ಷಕ ಪವಡಪ್ಪ, ಬೆಳ್ತಂಗಡಿ ಸಬ್ ಇನ್‌ಸ್ಪೆಕ್ಟರ್‌ ಮುರುಳೀಧರ್ ನಾಯ್ಕ್ ಮತ್ತಿತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.