ADVERTISEMENT

ಮಂಗಳೂರು | ನವಮಾಧ್ಯಮಗಳಿಂದ ವೈಚಾರಿಕತೆಗೆ ಧಕ್ಕೆ: ಮೋಹನ ಆಳ್ವ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 4:55 IST
Last Updated 7 ಆಗಸ್ಟ್ 2025, 4:55 IST
<div class="paragraphs"><p>ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮದ ಅಂಗವಾಗಿ ಏರ್ಪಡಿಸಿದ್ದ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗೆದ್ದ ಹುಬ್ಬಳ್ಳಿಯ ಈರಪ್ಪ ನಾಯ್ಕರ್ (ಎಡ ತುದಿ), ದ್ವಿತೀಯ ಬಹುಮಾನ ಗೆದ್ದ ಮೈಸೂರಿನ ಎಂ.ಎಸ್‌ ಬಸವರಾಜ್‌ (ಮಧ್ಯ) ಹಾಗೂ ಮೂರನೇ ಬಹುಮಾನ ಗಳಿಸಿದ ಮೈಸೂರಿನ&nbsp;ಉದಯಶಂಕರ್ ಅವರಿಗೆ ಬಹುಮಾನ ವಿತರಿಸಲಾಯಿತು&nbsp;</p></div>

ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮದ ಅಂಗವಾಗಿ ಏರ್ಪಡಿಸಿದ್ದ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗೆದ್ದ ಹುಬ್ಬಳ್ಳಿಯ ಈರಪ್ಪ ನಾಯ್ಕರ್ (ಎಡ ತುದಿ), ದ್ವಿತೀಯ ಬಹುಮಾನ ಗೆದ್ದ ಮೈಸೂರಿನ ಎಂ.ಎಸ್‌ ಬಸವರಾಜ್‌ (ಮಧ್ಯ) ಹಾಗೂ ಮೂರನೇ ಬಹುಮಾನ ಗಳಿಸಿದ ಮೈಸೂರಿನ ಉದಯಶಂಕರ್ ಅವರಿಗೆ ಬಹುಮಾನ ವಿತರಿಸಲಾಯಿತು 

   

ಮಂಗಳೂರು: ಓದುಗರು, ಕೇಳುಗರು ಅಥವಾ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುವ ಧಾವಂತದಲ್ಲಿ ಕೆಲವು ನವಮಾಧ್ಯಮಗಳು ಇಲ್ಲಸಲ್ಲದ ಕಸರತ್ತು ಮಾಡುತ್ತಿದ್ದು ವೈಚಾರಿಕತೆಯನ್ನು ತೆರೆಮರೆಗೆ ಸರಿಸುತ್ತಿವೆ ಎಂದು ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.

ನಗರದಲ್ಲಿ ಬುಧವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ‘ಸುವರ್ಣ ಸಂಭ್ರಮ’ ಕಾರ್ಯಕ್ರಮದಲ್ಲಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು ‘ಜೋತಿಷ್ಯದ ಹೆಸರಿನಲ್ಲಿ ಆತಂಕ ಸೃಷ್ಟಿಸುವ ಮಾಧ್ಯಮಗಳು ಲೈಂಗಿಕತೆ, ಅಪರಾಧ ಮತ್ತು ವೈಯಕ್ತಿಕ ವಿಷಯಗಳಿಗೆ ಒತ್ತುಕೊಟ್ಟು ವೈಚಾರಿಕ ವಿಷಯಗಳನ್ನು ನಗಣ್ಯ ಮಾಡುತ್ತಿವೆ. ವೈರಲ್ ಕಂಟೆಂಟ್‌ಗಳೇ ಅವುಗಳ ಜೀವಾಳವಾಗಿವೆ’ ಎಂದರು.

ADVERTISEMENT

ವೈಜ್ಞಾನಿಕ ಮನೋಭಾವದೊಂದಿಗೆ ಆಧುನಿಕತೆ, ಸಾಂಸ್ಕೃತಿಕತೆ ಮತ್ತು ಸೌಹಾರ್ದವನ್ನು ಬೆಳೆಸುವ ಕೆಲಸವನ್ನು ಪತ್ರಿಕೋದ್ಯಮ ಮಾಡಬೇಕು. ಪ್ರಜಾಪ್ರಭುತ್ವದೊಂದಿಗೆ ಹೊಕ್ಕುಳ ಬಳ್ಳಿಯ ಸಂಬಂಧ ಹೊಂದಿರುವ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವವರು ಸತ್ಯವನ್ನು ಹುಡುಕುವ ಕಾರ್ಯದಲ್ಲಿ ಉತ್ಸಾಹ ಕಳೆದುಕೊಳ್ಳಬಾರದು. ಸಮೂಹ ಮಾಧ್ಯಮಗಳ ಬಗ್ಗೆ ಯುವ ಜನರು ಜಾಗರೂಕರಾಗಿಬೇಕು ಎಂದು ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ ತಂತ್ರಜ್ಞಾನ ಬೆಳೆದ ಮೇಲೆ ಮಾಧ್ಯಮದ ಹರವು ವಿಸ್ತಾರಗೊಂಡಿದೆ. ಓದಿದ್ದಕ್ಕೆ, ಕೇಳಿದ್ದಕ್ಕೆ ಮತ್ತು ನೋಡಿದ್ದಕ್ಕೆ ಕಮೆಂಟ್ ಮಾಡುವ ಅವಕಾಶ ಈಗ ಇದೆ. ಆದರೆ ಅದನ್ನೇ ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ ಎಂದರು.

ಮಾಧ್ಯಮ ಒಂದು ಕಾಲದಲ್ಲಿ ಕೇವಲ ಸಂಪರ್ಕಕ್ಕೆ ಬಳಕೆಯಾಗುತ್ತಿತ್ತು. ಈಗ ಬೆಳೆದು ಸಮೂಹ ಮಾಧ್ಯಮಗಳ ವರೆಗೆ ತಲುಪಿದೆ. ಸಮೂಹ ಮಾಧ್ಯಮಗಳ ದುರ್ಬಳಕೆಯಾಗುತ್ತಿದೆ. ಮುದ್ರಣ ಮಾಧ್ಯಮಗಳಿಗೆ ಸಂಪಾದಕೀಯ ಮಂಡಳಿಯ ನಿಯಂತ್ರಣ ಇರುತ್ತದೆ. ಆದರೆ ಸಮೂಹ ಮಾಧ್ಯಮಗಳನ್ನು ಬಳಸುವವರು ತಾವೇ ಸಂಪಾದಕರಾಗುತ್ತಿದ್ದಾರೆ. ಕೈಯಲ್ಲಿ ಮೊಬೈಲ್ ಫೋನ್ ಒಂದಿದ್ದರೆ ಯಾರನ್ನು ಬೇಕಾದರೂ ಮುಗಿಸಬಹುದು ಎಂಬಂತೆ ವರ್ತಿಸುತ್ತಿದ್ದಾರೆ. ಕೆಲವು ದೃಶ್ಯ ಮಾಧ್ಯಮಗಳು ಕೂಡ ಟಿಆರ್‌ಪಿಗಾಗಿ ಏನೇನೋ ಸಾಹಸ ಮಾಡುತ್ತಿವೆ. ಕೆಲವು ಆ್ಯಂಕರ್‌ಗಳು ತಾವೇ ವಕೀಲರೂ ನ್ಯಾಯಾಧೀಶರೂ ಅರ್ಜಿದಾರರೂ ಆಗುತ್ತಿದ್ದಾರೆ ಎಂದು ಅವರು ಹೇಳಿದರು.

ಮುಖಂಡ ನಳಿನ್ ಕುಮಾರ್ ಕಟೀಲ್ ಮಾತನಾಡಿ ಕೆಲವು ಅಹಿತಕರ ಘಟನೆಗಳನ್ನು ಆಧಾರವಾಗಿರಿಸಿಕೊಂಡು ಮಂಗಳೂರಿನ ಹೆಸರಿಗೆ ಬಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. ಬ್ರಾಂಡ್ ಮಂಗಳೂರು ಮೂಲಕ ಅದಕ್ಕೆ ಉತ್ತರ ಕೊಡಬೇಕಾಗಿದೆ ಎಂದರು.

ಶಾಸಕರಾದ ವೇದವ್ಯಾದ ಕಾಮತ್, ಡಾ.ಭರತ್ ಶೆಟ್ಟಿ, ಪತ್ರಕರ್ತರಾದ ರವಿ ಹೆಗ್ಡೆ, ಬಿ.ರವೀಂದ್ರ ಶೆಟ್ಟಿ, ವಾಲ್ಟರ್ ನಂದಳಿಕೆ, ಅದಾನಿ ಗ್ರೂಪ್‌ನ ಕಿಶೋರ್ ಆಳ್ವ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಝಕಾರಿಯ ಜೋಕಟ್ಟೆ, ಜಯರಾಮ ರೈ, ವೆನ್ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್ ಪಾಲ್ಗೊಂಡಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರ ಸಂಘ ಬೆಳೆದುಬಂದ ಹಾದಿಯ ಬಗ್ಗೆ ಆನಂದ್ ಶೆಟ್ಟಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.