ADVERTISEMENT

ಲಾರಿಗಳಲ್ಲಿ ಮಿತಿಗಿಂತ ಹೆಚ್ಚು ಭಾರ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 7:40 IST
Last Updated 31 ಡಿಸೆಂಬರ್ 2025, 7:40 IST
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು   

ವಿಟ್ಲ: ಕೇರಳ - ಕರ್ನಾಟಕ ಗಡಿಪ್ರದೇಶದ ರಸ್ತೆಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಭಾರವನ್ನು ಹೇರಿಕೊಂಡು ಲಾರಿಗಳಲ್ಲಿ ಮಣ್ಣು ಸಾಗಿಸುತ್ತಿರುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕ್ರಮವಹಿಸುವಂತೆ ಆಗ್ರಹಿಸಿ ಸ್ಥಳೀಯರು ಮಂಗಳವಾರ ನೆಲ್ಲಿಕಟ್ಟೆ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿದರು.

ನೆಲ್ಲಿಕಟ್ಟೆಯಿಂದ ಮುಗುಳಿ ಗಡಿವರೆಗಿನ ರಸ್ತೆ ಸುಮಾರು 3.4 ಕಿ.ಮೀ. ಇದ್ದು, ಇಲಾಖೆಯ ಮಾಹಿತಿಯ ಪ್ರಕಾರ ಧಾರಣಾ ಸಾಮರ್ಥ್ಯ ಗರಿಷ್ಠ 18 ಟನ್ ಆಗಿದೆ. ಕಾನೂನು ಪ್ರಕಾರ ಅಧಿಕ ಭಾರದ ಸರಕು ವಾಹನ ಸಂಚಾರ ನಿಷೇಧಿಸಿ ಅಧಿಕಾರಿಗಳು ಸೂಕ್ತ ನಿರ್ದೇಶನ ನೀಡಿ, ಸೂಚನಾ ಫಲಕವನ್ನು ಅಳವಡಿಸಬೇಕು. ಗಣಿ ಇಲಾಖೆಯಿಂದ ಅಂಗೀಕೃತ ಕೆಂಪುಕಲ್ಲಿನ ಪುಡಿ ಸಾಗಿಸುವ ಅಧಿಕ ಸಾಮರ್ಥ್ಯದ ಸರಕು ವಾಹನ ಸಂಚಾರಕ್ಕೆ ಯೋಗ್ಯವಾಗುವಂತೆ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಸಂಬಂಧ ಪಟ್ಟವರಿಗೆ ಮನವರಿಕೆ ಮಾಡಬೇಕು. ಹಗಲು ಹೊತ್ತಿನಲ್ಲಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರ ಸಂಚಾರಕ್ಕೆ ಅಪಾಯಕಾರಿಯಾಗಿ ಸಂಚರಿಸುವ ಭಾರಿ ವಾಹನ ಸಂಚಾರ ನಿಷೇಧಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡುವಂತೆ ಆಗ್ರಹ ವ್ಯಕ್ತವಾಯಿತು.

ಮುಗುಳಿಯಲ್ಲಿ ಬೆಳಿಗ್ಗೆ ಮರ ಬಿದ್ದು ಕೆಲವು ಸಮಯದವರೆಗೆ ಸಂಚಾರ ಸ್ಥಗಿತವಾಗಿತ್ತು. ಪ್ರತಿಭಟನೆಯನ್ನು ಬೆಂಬಲಿಸಿ ಕನ್ಯಾನ ಉಪ್ಪಳ ನಡುವೆ ಸಂಚರಿಸುವ ಬಸ್‌, ಆಟೊರಿಕ್ಷಾ, ವಾಣಿಜ್ಯ ವಾಹನ ಸಂಚಾರ ಸ್ವಯಂಪ್ರೇರಿತವಾಗಿ ನಿಲುಗಡೆಯಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸಹಾಯಕ ಎಂಜಿನಿಯರ್ ಜಗದೀಶ್, ಬಂಟ್ವಾಳ ಪ್ರಾದೇಶಿಕ ಸಾರಿಗೆ ಇಲಾಖೆಯ ಮೋಟಾರ್‌ ವಾಹನ ನಿರೀಕ್ಷಕ ಪ್ರಮೋದ್ ಎಂ.ಭಟ್, ಸಚಿನ್ ಕ್ರಮದ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ADVERTISEMENT

ಕರೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೂರ್ಯಕಾಂತಿ, ಉಪಾಧ್ಯಕ್ಷ ಅನ್ವರ್ ಕರೋಪಾಡಿ, ಕನ್ಯಾನ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ. ಪಿ.ರಘುರಾಮ ಶೆಟ್ಟಿ, ಅಬ್ದುಲ್ ಮಜೀದ್, ಪ್ರಮುಖರಾದ ಮೊಯಿದು ಕುಞಿ ಮಂಡ್ಯೂರು, ಶ್ರೀನಿವಾಸ ಭಟ್ ಕಮ್ಮಾಜೆ, ಇಸ್ಮೈಲ್ ಬಂಡಿತಡ್ಕ, ಸ್ಥಳೀಯರಾದ ವೆಂಕಟರಮಣ ಬೆಟ್ಟ ಪಾದೇಕಲ್ಲು, ಗಣೇಶ್ ಮಂಡ್ಯೂರು, ಡಾ.ರಾಮಚಂದ್ರ ಕೆ., ಸಫ್ವಾನ್ ಪಾಡಿ, ತಾರಾನಾಥ ಒಡಿಯೂರು, ಅಬ್ದುಲ್ ಹಮೀದ್ ಪಾದೆಕಲ್ಲು, ಅಬ್ದುಲ್ ಹಕೀಂ ಪಾದೆಕಲ್ಲು, ಆನಂದ ಪಾದೆಕಲ್ಲು, ರಾಧಾಕೃಷ್ಣ ಒಡಿಯೂರು, ಶರೀಫ್ ಕರೋಪಾಡಿ, ಶಾಕಿರ್ ಸಮಡ್ಕ, ಕುಞಿ ಮೋನು ಮಂಡ್ಯೂರು, ಸುರೇಶ್ ಪಾದೆಕಲ್ಲು, ವಿಶ್ವನಾಥ ಪಾದೆಕಲ್ಲು, ಮೀನಾಕ್ಷಿ ಚೆಲ್ಲಂಗಾರು, ಭಾರತಿ ಚೆಲ್ಲಂಗಾರು, ಶಕುಂತಲಾ ಚೆಲ್ಲಂಗಾರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮೊಯಿದು ಕುಞಿ ಪಾದೆಕಲ್ಲು ಕಾರ್ಯಕ್ರಮ ಸಿರೂಪಿಸಿದರು.

ರಸ್ತೆ ಬಳಕೆದಾರರು ಹಲವು ಬಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಈ ಬಗ್ಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ರಸ್ತೆಯನ್ನು ಪೂರ್ಣ ಸರಿಪಡಿಸಬೇಕು. ಹೋರಾಟ ತೀವ್ರ ಸ್ವರೂಪ ಪಡೆಯುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.