ADVERTISEMENT

ಪುತ್ತೂರು | ಕೋಳಿಫಾರಂ ಕಟ್ಟಡ ಕುಸಿತ: ಕೋಳಿ ಮರಿ ಸಾವು

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 13:30 IST
Last Updated 20 ಜುಲೈ 2024, 13:30 IST
ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲಾಜೆಯಲ್ಲಿ ಕೋಳಿಫಾರಂ ಕಟ್ಟಡ ಕುಸಿದಿದೆ
ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲಾಜೆಯಲ್ಲಿ ಕೋಳಿಫಾರಂ ಕಟ್ಟಡ ಕುಸಿದಿದೆ   

ಪುತ್ತೂರು: ಕಳೆದ ಕೆಲ ದಿನಗಳಿಂದ ಎಡಬಿಡದೆ ಸುರಿದ ಗಾಳಿ–ಮಳೆಯಿಂದಾಗಿ ಕೋಳಿ ಸಾಕಾಣಿಕೆ ಕಟ್ಟಡ (ಕೋಳಿ ಫಾರಂ ಕಟ್ಟಡ) ಕುಸಿದು ಸುಮಾರು 5 ಸಾವಿರ ಕೋಳಿ ಮರಿಗಳು ಮೃತಪಟ್ಟ ಘಟನೆ ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲಾಜೆ ಎಂಬಲ್ಲಿ ನಡೆದಿದೆ.

ಕೊಲ್ಲಾಜೆ ನಿವಾಸಿ ರಾಜಮೋಹನ್‌ ರೈ ಎಂಬುವರಿಗೆ ಸೇರಿದ ಕೋಳಿ ಸಾಕಾಣಿಕೆ ಕಟ್ಟಡ ಗುರುವಾರ ಸಂಜೆ ಕುಸಿದಿದ್ದು, ಘಟನೆಯಿಂದಾಗಿ ಸುಮಾರು ₹ 15ಲಕ್ಷದಷ್ಟು ನಷ್ಟ ಉಂಟಾಗಿದೆ ಎಂದು ರಾಜ್‌ಮೋಹನ್ ರೈ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಿಯಡ್ಕ ಗ್ರಾಮ ಆಡಳಿತಾಧಿಕಾರಿ ಗೋಪಿಲಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT