
ಉಪ್ಪಿನಂಗಡಿ: ಉಡುಪಿ ಕೃಷ್ಣ ಮಠದ ಪರ್ಯಾಯ ಪೀಠಾರೋಹಣ ಮಾಡಲಿರುವ ಶೀರೂರು ಮಠಾಧೀಶ ವೇದವರ್ಧನ ತೀರ್ಥ ಸ್ವಾಮೀಜಿಯನ್ನು ಪರ್ಯಾಯ ಪೂರ್ವಭಾವಿ ನಡೆಸುವ ಲೋಕ ಸಂಚಾರದ ಅಂಗವಾಗಿ ಗುರುವಾರ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಸ್ವಾಗತಿಸಿ ಗೌರವಿಸಲಾಯಿತು.
ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳಕ್ಕೆ ಕರೆದೊಯ್ದು ನದಿ ತೀರ್ಥ ಸಂಪ್ರೋಕ್ಷಿಸಲಾಯಿತು. ಬಳಿಕ ಸ್ವಾಮೀಜಿ ಸಹಸ್ರಲಿಂಗೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನಾಯಕ್, ಪ್ರಧಾನ ಅರ್ಚಕ ಕೆ.ಹರೀಶ್ ಉಪಾಧ್ಯಾಯ, ಸದಸ್ಯರಾದ ಸೋಮನಾಥ, ದೇವಿದಾಸ್ ರೈ, ವೆಂಕಪ್ಪ ಪೂಜಾರಿ ಮರುವೇಲು, ಪ್ರಮುಖರಾದ ಎನ್.ಗೋಪಾಲ ಹೆಗ್ಡೆ, ಕಾಮಾಕ್ಷಿ ಜಿ.ಹೆಗ್ಡೆ, ಸುಧಾಕರ ಶೆಟ್ಟಿ, ಶ್ರೀನಿಧಿ ಉಪಾಧ್ಯಾಯ, ಶ್ರೀವತ್ಸ ಉಪಾಧ್ಯಾಯ, ದೇವಳದ ಸಿಬ್ಬಂದಿ ದಿವಾಕರ ಗೌಡ, ಪದ್ಮನಾಭ, ಕೃಷ್ಣಪ್ರಸಾದ್ ಬಡಿಲ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.