ADVERTISEMENT

ಸಂಸ್ಕಾರ ಕಲಿಸುವ ಕೆಲಸ ಸಂಸ್ಕಾರ ಭಾರತಿಯಿಂದಾಗಲಿ: ಮೋಹನದಾಸ ಪರಮಹಂಸ ಸ್ವಾಮೀಜಿ

ವಂದೇಮಾತರಂ ಹಾಗೂ ಗುರುವಂದನಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 5:45 IST
Last Updated 26 ಜುಲೈ 2022, 5:45 IST
ವಂದೇಮಾತರಂ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಮೋಹನದಾಸ ಪರಮಹಂಸ ಸ್ವಾಮೀಜಿ ಉದ್ಘಾಟಿಸಿದರು.
ವಂದೇಮಾತರಂ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಮೋಹನದಾಸ ಪರಮಹಂಸ ಸ್ವಾಮೀಜಿ ಉದ್ಘಾಟಿಸಿದರು.   

ವಿಟ್ಲ: ‘ಹಿಂದೂ ಧರ್ಮದಲ್ಲಿ ನಾವಿಂದು ವರ್ಚಸ್ಸು ಮತ್ತು ತೇಜಸ್ಸನ್ನು ಕಳೆದುಕೊಳ್ಳುತ್ತಿದ್ದೇವೆ. ಮನೆಮನೆಗಳಿಗೆ ಸಂಸ್ಕಾರ ಕಲಿಸುವ ಕೆಲಸ ಸಂಸ್ಕಾರ ಭಾರತಿಯಿಂದಾಗಲಿ’ ಎಂದು ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಸಂಸ್ಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲಾ ಘಟಕದಿಂದ ನಡೆದ ವಂದೇಮಾತರಂ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಸ್ಕಾರ ಭಾರತಿಯ ಟಿ. ತಾರಾನಾಥ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಕೃಷ್ಣ ಐತಾಳ್, ಪೂಂಜೂರು ಸರಪಾಡಿ, ವಿಜಯಶಂಕರ ಆಳ್ವ, ರೂಪಲೇಖಾ ಪುತ್ತೂರು ಇದ್ದರು.

ADVERTISEMENT

ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ, ವಿಜಯಕುಮಾರ್ ಭಟ್, ಶಾರದಾ ಜಿ. ಬಂಗೇರ ಅವರನ್ನು ಸನ್ಮಾನಿಸಲಾಯಿತು. ತುಳಸಿದಾಸ್ ಶೆಣೈ ವಂದೇ ಮಾತರಂ ಹಾಡಿದರು. ವಿಜಯ ಶೆಟ್ಟಿ ಸಾಲೆತ್ತೂರು ವಂದಿಸಿದರು. ಡಾ.ವಾರಿಜ ನೀರ್ಬೈಲ್ ಆಶಯಗೀತೆ ಹಾಡಿದರು. ತೃಶಾ ಶೆಟ್ಟಿ, ಜ್ಯೋತಿ ಶೆಣೈ, ಜಗದೀಶ್ ಕಡೆಗೋಳಿ ಇದ್ದರು. ಸದಾಶಿವ ಅಳಿಕೆ ಸ್ವಾಗತಿಸಿದರು.

ಸಂಕಪ್ಪ ಶೆಟ್ಟಿ ನಿರೂಪಿಸಿದರು. ಮಂಜು ವಿಟ್ಲ ವಂದಿಸಿದರು. ಆರ್.ಕೆ.ಆರ್ಟ್ಸ್‌ನ ರಾಜೇಶ್ ವಿಟ್ಲ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.