ಮಂಗಳೂರು: ಭಾರತದ ಲೆಕ್ಕಪರಿಶೋಧಕರ ಸಂಸ್ಥೆ (ಸಿಐಎಐ) ಮಂಗಳೂರು ಶಾಖೆ ವತಿಯಿಂದ ‘ವಿಮರ್ಶ್– ಜ್ಞಾನದ ಪಯಣ, ಬುದ್ಧಿಮತ್ತೆಯ ಸಮನ್ವಯ’ ಥೀಮ್ ಅಡಿಯಲ್ಲಿ ಲೆಕ್ಕ ಪರಿಶೋಧಕ ವಿದ್ಯಾರ್ಥಿಗಳ ಸಮ್ಮೇಳನವನ್ನು ಜೂನ್ 13 ಮತ್ತು 14ರಂದು ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ಸಿಐಎಐ ಮಂಗಳೂರು ಶಾಖೆಯ ಅಧ್ಯಕ್ಷ ಪ್ರಶಾಂತ್ ಪೈ ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಬೋರ್ಡ್ ಆಫ್ ಸ್ಟಡೀಸ್, ಐಸಿಎಐ ಸಹಯೋಗದಲ್ಲಿ ನಡೆಯುವ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳ 1,000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಲೆಕ್ಕ ಪರಿಶೋಧನೆಯಲ್ಲಿ ಕೃತಕ ಬುದ್ಧಿಮತ್ತೆ, ಕಾರ್ಪೊರೇಟೇತರ ವರದಿ ಸಲ್ಲಿಕೆ, ನೇರ ತೆರಿಗೆ ಬಿಲ್ ಮತ್ತು ಸಾಮಾಜಿಕ ಜಾಲತಾಣ, ಹೊಸ ತಂತ್ರಜ್ಞಾನ ಮತ್ತು ನೇರ ತೆರಿಗೆ ಈ ವಿಷಯಗಳನ್ನು ಆಧರಿಸಿ ವಿವಿಧ ಗೋಷ್ಠಿಗಳು ನಡೆಯಲಿವೆ’ ಎಂದರು.
13ರ ಬೆಳಿಗ್ಗೆ 10 ಗಂಟೆಗೆ ಯುನಿಕೋರ್ಟ್ ಐಎನ್‌ಸಿ ಸಂಸ್ಥಾಪಕ ಮತ್ತು ಮುಖ್ಯ ತಾಂತ್ರಿಕ ಅಧಿಕಾರಿ ಪ್ರಶಾಂತ್ ಶೆಣೈ ಕಟ್ಪಾಡಿ ಸಮ್ಮೇಳನ ಉದ್ಘಾಟಿಸುವರು ಎಂದರು.
ಡ್ಯಾನಿಯಲ್ ಮಾರ್ಷ್ ಪಿರೇರಾ, ಮಮ್ತಾ ರಾವ್, ಬಾಲಸುಬ್ರಹ್ಮಣ್ಯ ಎನ್., ನಿತಿನ್ ಬಾಳಿಗ, ಭೂಮಿಕಾ, ಅದಿತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.