ADVERTISEMENT

1500 ಆಸನ, 3500 ಮಂದಿಗೆ ಊಟಕ್ಕೆ ಸಿದ್ಧತೆ

ನಾಳೆಯಿಂದ ಎಲೆಬೇತೂರಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 4:46 IST
Last Updated 25 ಮಾರ್ಚ್ 2022, 4:46 IST
ಬಿ. ವಾಮದೇವಪ್ಪ
ಬಿ. ವಾಮದೇವಪ್ಪ   

ದಾವಣಗೆರೆ: ನಗರದ ಹೊರವಲಯದ ಎಲೆಬೇತೂರು ಗ್ರಾಮದ ಮಾಗಾನಹಳ್ಳಿ ಅಂಬಾಸಪ್ಪನವರ ಮೈದಾನದಲ್ಲಿ ಮಾರ್ಚ್‌ 26, 27ರಂದು ನಡೆಯಲಿರುವ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.

18 ಎಕರೆ ಪ್ರದೇಶದ ಜಾಗದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ.200X100ಅಡಿಯ ಸಭಾಂಗಣದಲ್ಲಿ 40X60ಅಡಿಯ ವೇದಿಕೆ ನಿರ್ಮಾಣಗೊಳ್ಳುತ್ತಿದೆ. ಸಭಾಂಗಣದಲ್ಲಿ 1500 ಆಸನದ ವ್ಯವಸ್ಥೆ ಇರಲಿದೆ. 15ರಿಂದ 20 ಮಳಿಗೆಗಳನ್ನು ಹಾಕಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದ್ದಾರೆ.

ಕನ್ನಡದ ಹಬ್ಬದಲ್ಲಿ ಬರುವ ಎಲ್ಲ ಕನ್ನಡದ ಅಭಿಮಾನಿಗಳಿಗೆ ಭರ್ಜರಿ ಭೋಜನದ ವ್ಯವಸ್ಥೆಮಾಡಲಾಗಿದೆ. ಎರಡು ದಿನಗಳ ಕಾಲ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ.
ಬೆಳಿಗ್ಗೆ 1500 ಮಂದಿ ಉಪಾಹಾರ ಸೇವಿಸುವ ನಿರೀಕ್ಷೆ ಇದೆ.ಮಧ್ಯಾಹ್ನ 3500 ಮಂದಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಇದೆ. ರಾತ್ರಿ ಮತ್ತೆ 1500 ಮಂದಿ ಊಟ ಮಾಡುವ ಸಾಧ್ಯತೆ ಇದೆ ಎಂದುಅಂದಾಜಿಸಿದ್ದಾರೆ.

ADVERTISEMENT

ಮೊದಲ ದಿನ ಬೆಳಿಗ್ಗಿನ ಉಪಾಹಾರದಲ್ಲಿ ಪುಲಾವು, ಮಧ್ಯಾಹ್ನ ಊಟಕ್ಕೆ ಗೋಧಿ ಪಾಯಸ, ಕರದಂಟು, ಚಿತ್ರಾನ್ನ, ಅನ್ನ-ಸಾಂಬಾರು, ಮಿರ್ಚಿ, ಪಲ್ಯ, ಎರಡನೇ ದಿನಬೆಳಿಗ್ಗೆ ಉಪ್ಪಿಟ್ಟು, ಚಿತ್ರಾನ್ನ, ಮಧ್ಯಾಹ್ನ ಚಪಾತಿ ಪಲ್ಯ, ಶ್ಯಾವಿಗೆ ಪಾಯಸ, ಚಿತ್ರಾನ್ನ, ಈರುಳ್ಳಿ ಬಜೆ, ಇರಲಿದೆ. ರಾತ್ರಿ ಊಟಕ್ಕೆ ಅನ್ನ ಸಾಂಬಾರು ವ್ಯವಸ್ಥೆ ಮಾಡಲಾಗಿದೆ.

ಎಲ್ಲರಿಗೂ ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಇರಲಿದೆ ಎಂದು ಬಿ. ವಾಮದೇವಪ್ಪ, ಎಲೆಬೇತೂರಿನ ಬಸವರಾಜಪ್ಪ ತಿಳಿಸಿದ್ದಾರೆ.

ಸಮ್ಮೇಳನದ ವರದಿ ಮಾಡಲು ಬರುವ ಸುದ್ದಿಗಾರರಿಗೆ ಸುದ್ದಿ ಕಳುಹಿಸಲು ಮಾಧ್ಯಮ ಕೇಂದ್ರದವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.