ADVERTISEMENT

ದಾವಣಗೆರೆ: ದಫನ ಮಾಡಿದ್ದಕ್ಕೆ ಸ್ಥಳೀಯರ ವಿರೋಧ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 10:42 IST
Last Updated 6 ಜುಲೈ 2020, 10:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯನ್ನು ಕೊರೊನಾ ಇಲ್ಲದ ನಮ್ಮೂರಲ್ಲಿ ಧಫನ ಮಾಡಿದ್ದು ಸರಿಯಲ್ಲ ಎಂದು ಇಲ್ಲಿನ ರಾಮನಗರ, ಎಸ್.ಒ.ಜಿ ಕಾಲೊನಿ ನಿವಾಸಿಗಳು ಸೋಮವಾರ ಜಿಲ್ಲಾಡಳಿತದಿಂದ ವಿರುದ್ಧ ಪ್ರತಿಭಟನೆ ನಡೆಸಿದರು.

ರಾತ್ರೋರಾತ್ರಿ ಸೋಂಕಿತ ಶವಗಳನ್ನು ದಪನ್ ಮಾಡಿದ್ದಾರೆ. ಗ್ರಾಮದ ಪಕ್ಕದಲ್ಲೇ ಇರುವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದು ಸರಿಯಲ್ಲ‌. ಎಸ್ ಓಜಿ ಕಾಲೋನಿಯಲ್ಲಿ ಇದುವರೆಗೂ ಕರೋನಾ ಸೋಂಕು ಇಲ್ಲ ಎಂದು ರಾಮನಗರ ರುದ್ರಭೂಮಿ ಎದುರೇ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ನೂರಾರು ಜನರು ಭಾಗವಹಿದ್ದರು.

ಅಂತ್ಯಕ್ರಿಯೆಯನ್ನು ವೈಜ್ಞಾನಿಕವಾಗಿ ನಡೆಸಲಾಗಿದೆ. ಸ್ಮಶಾನದಲ್ಲಿ ಅಂತ್ಯಕ್ರಿಯೆಯನ್ನು ನಡೆಸದೇ ಇನ್ನೆಲ್ಲಿ ನಡೆಸೋದು. ಪ್ರತಿಭಟನೆ ಸರಿಯಲ್ಲ. ಅಲ್ಲಿ ಕೊರೊನಾ ವೈರಸ್ ಹರಡಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.