ಸಾಂದರ್ಭಿಕ ಚಿತ್ರ
ಪ್ರಜಾವಾಣಿ ಚಿತ್ರ
ದಾವಣಗೆರೆ: ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಕೈಬಿಡುವಂತೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಹದಡಿ ರಸ್ತೆಯ ‘ಬೆಸ್ಕಾಂ’ ಗ್ರಾಮಾಂತರ ವಿಭಾಗದ ಕಚೇರಿಯ ಎದುರು ಜಮಾಯಿಸಿದ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಹುನ್ನಾರದಿಂದ ಈ ಮಸೂದೆ ರೂಪಿಸಲಾಗಿದೆ. ಇದು ಜಾರಿಗೆ ಬಂದರೆ ಸಾರ್ವಜನಿಕರಿಗೆ ದೊರೆಯುವ ವಿದ್ಯುತ್ ಸೇವೆಗಳು ಖಾಸಗಿ ಕಂಪನಿಗಳ ಲಾಭದಾಯಕ ವ್ಯವಹಾರವಾಗಿ ಮಾರ್ಪಡುವ ಅಪಾಯವಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಅಳವಡಿಸಿದ ಸ್ಮಾರ್ಟ್ ಮೀಟರ್‌ನಿಂದ ದೋಷಪೂರಿತ ಬಿಲ್‍ಗಳು ಹೆಚ್ಚಾಗಿವೆ. ಅನಿಯಂತ್ರಿತ ದರ ಏರಿಕೆ, ತಾಂತ್ರಿಕ ದೋಷಗಳು, ಅಸಮಂಜಸ ವಿದ್ಯುತ್ ಕಡಿತ ಕಂಡುಬಂದಿದೆ. ಗ್ರಾಮೀಣ ಪ್ರದೇಶದ ಮನೆ, ಕೃಷಿ ಪಂಪ್‍ಸೆಟ್‌ಗಳಿಗೆ ತೊಂದರೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಮುಖಂಡ ಆವರಗೆರೆ ಎಚ್.ಜಿ. ಉಮೇಶ್, ರೈತ ಮುಖಂಡ ಹೊನ್ನೂರು ಮುನಿಯಪ್ಪ, ಪಿ.ಪಿ. ಮರುಳಾರಾಧ್ಯ, ಇ. ಶ್ರೀನಿವಾಸ್, ಮಂಜುನಾಥ್ ಕುಕ್ಕವಾಡ, ಮಂಜುನಾಥ್ ಕೈದಾಳೆ, ಕೆ.ಬಾನಪ್ಪ, ಸತೀಶ್ ಅರವಿಂದ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.