ADVERTISEMENT

ಉಪನ್ಯಾಸಕನ ಮನೆಯಲ್ಲಿ ₹ 33.60 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ ಆಭರಣ, ನಗದು ಕಳ್ಳತನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2023, 7:37 IST
Last Updated 27 ಜುಲೈ 2023, 7:37 IST
ಕಳ್ಳತನಕ್ಕೆ ಮನೆಯ ಮುಂದೆ ಅಳವಡಿಸಿರುವ ಕಬ್ಬಿಣದ ಸರಳುಗಳನ್ನು ಕತ್ತರಿಸಿರುವುದು
ಕಳ್ಳತನಕ್ಕೆ ಮನೆಯ ಮುಂದೆ ಅಳವಡಿಸಿರುವ ಕಬ್ಬಿಣದ ಸರಳುಗಳನ್ನು ಕತ್ತರಿಸಿರುವುದು   

ಚನ್ನಗಿರಿ : ಪಟ್ಟಣದ ಮಣ್ಣಮ್ಮ ಪ್ರೌಢಶಾಲೆಯ ಹಿಂಭಾಗದಲ್ಲಿರುವ ಮನೆಯೊಂದರಲ್ಲಿ ಕಳ್ಖರು ಮನೆಯ ಬೀಗ ಮುರಿದು ಬಂಗಾರ, ಬೆಳ್ಳಿ ಹಾಗೂ ಹಣವನ್ನು ಕಳ್ಳತನ ಮಾಡಿದ್ದಾರೆ.

ಮಣ್ಣಮ್ಮ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ

ಸಿದ್ದೇಶ್ವರಪ್ಪ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಸಿದ್ದೇಶ್ವರಪ್ಪ ಅವರ ಪತ್ನಿಯೂ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಬುಧವಾರ ಮಧ್ಯಾಹ್ನ ಮನೆಗೆ ಬೀಗ ಹಾಕಿ ಪುತ್ರಿಯನ್ನು ದಾವಣಗೆರೆಯ ಕಾಲೇಜಿಗೆ ಬಿಡಲು ಹೋದಾಗ ಕಳ್ಳತನ ನಡೆದಿದೆ. ಮನೆಯ ಮುಂದೆ ಇರುವ ಕಬ್ಬಿಣದ ಸರಳುಗಳನ್ನು ಕತ್ತರಿಸಿದ ಕಳ್ಳರು ಮನೆಯ ಬಾಗಿಲ ಮುರಿದು ಮನೆಯ ಒಳಗೆ ನುಗ್ಗಿ ಬೀರುವಿನ ಬೀಗವನ್ನು ಒಡೆದು ಬೀರುವಿನಲ್ಲಿದ್ದ ಸುಮಾರು ₹ 15.80 ಲಕ್ಷ ಮೌಲ್ಯದ ಬಂಗಾರ ಹಾಗೂ ₹ 17.80 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಹಾಗೂ ₹ 1.50 ಲಕ್ಷ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ADVERTISEMENT

ಉಪನ್ಯಾಸಕ ಸಿದ್ದೇಶ್ವರಪ್ಪ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು,

ಡಿವೈಎಸ್ ಪಿ ಡಾ. ಸಂತೋಷ್ ಅವರ ಮಾರ್ಗದರ್ಶನದಲ್ಲಿ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.