ADVERTISEMENT

ಹರಿಹರ: ಹಿಂದೂ ಮಹಾ ಗಣಪತಿ ಸಮಿತಿಯಿಂದ ಹೋಮ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 6:10 IST
Last Updated 5 ಸೆಪ್ಟೆಂಬರ್ 2025, 6:10 IST
ಹರಿಹರದ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗುರುವಾರ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಷ್ಠಾಪಿಸಿರುವ ಹಿಂದೂ ಮಹಾ ಗಣಪತಿ ಸ್ಥಳದಲ್ಲಿ ಹೋಮ, ಪೂರ್ಣಾಹುತಿ ನಡೆಯಿತು
ಹರಿಹರದ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗುರುವಾರ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಷ್ಠಾಪಿಸಿರುವ ಹಿಂದೂ ಮಹಾ ಗಣಪತಿ ಸ್ಥಳದಲ್ಲಿ ಹೋಮ, ಪೂರ್ಣಾಹುತಿ ನಡೆಯಿತು   

ಹರಿಹರ: ಹಿಂದೂ ಜಾಗರಣ ವೇದಿಕೆಯಿಂದ ನಗರದ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾ ಗಣಪತಿ ಮಂಟಪದಲ್ಲಿ ನಗರದ ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಹಾಗೂ ಮಹಾಗಣಪತಿ ಹೋಮವನ್ನು ಗುರುವಾರ ನಡೆಸಲಾಯಿತು.

ಬೆಳಿಗ್ಗೆ ಗಣೇಶ ಪೂಜೆ ಸಲ್ಲಿಸುವ ಮೂಲಕ ಮಹಾಗಣಪತಿ ಹೋಮ, ಮಹಾ ಮೃತ್ಯುಂಜಯ ಹೋಮ, ಸೂಕ್ತ ಹೋಮ, ದೇವಿ ಸೂಕ್ತ ಹೋಮವನ್ನು ಗುರುದತ್ತ ಶಾಸ್ತ್ರಿ ನೇತೃತ್ವದ ತಂಡ ನಡೆಸಿಕೊಟ್ಟತು.

ಪೂರ್ಣಹುತಿ ನಗರದ ಗಣ್ಯರ ಹಾಗೂ ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು.

ADVERTISEMENT

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅದ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ, ಮುಖಂಡರಾದ ಜಿ.ಬಿ.ವಿನಯ್ ಕುಮಾರ್, ಎಬಿಎಂ ವಿಜಯ್ ಕುಮಾರ್, ನಲ್ಲೂರು ನಾಗರಾಜ್, ಹಿಂಡಸಘಟ ಲಿಂಗರಾಜ್, ಉತ್ಸವ ಸಮಿತಿಯ ಪದಾಧಿಕಾರಿಗಳಾದ ಪೈಲ್ವಾನ್ ಸುರೇಶ್ ಚಂದಾಪುರ್, ಶೇಖರ್‌ಗೌಡ ಪಾಟೀಲ್, ನಾಗರಾಜ್ ರೋಖಡೆ, ಪ್ರಮೀಳಾ ನಲ್ಲೂರು, ಶಶಿಕುಮಾರ್ ಮೆಹರವಾಡೆ, ಬಸವನಗೌಡ್ರು, ಎಚ್.ದಿನೇಶ್, ನಾಗರಾಜ್ ಭಂಡಾರಿ, ಸ್ವಾತಿ ಹನುಮಂತ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.