
ಕಡರನಾಯ್ಕನಹಳ್ಳಿ: ಸಾಧನೆಗೆ ಗುರುವೇ ಬುನಾದಿ ಎಂದು ಗುರು ಸಿದ್ಧಾಶ್ರಮದ ಯೋಗಾನಂದ ಸ್ವಾಮೀಜಿ ಹೇಳಿದರು.
ಸಮೀಪದ ಯಲವಟ್ಟಿ ಗ್ರಾಮದ ಗುರುಸಿದ್ಧಾಶ್ರಮದಲ್ಲಿ ಅವರಾತ್ರಿ ಅಮಾವಾಸ್ಯೆ ಪ್ರಯುಕ್ತ ಹಮ್ಮಿಕೊಂಡಿದ್ದ ಸಂತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಎಲ್ಲಾ ಕಾಲದಲ್ಲೂ ಒಳ್ಳೆಯದು, ಕೆಟ್ಟದ್ದು ಇತ್ತು. ಕಾಲ ಕೆಟ್ಟಿಲ್ಲ ನಮ್ಮ ಮನಸ್ಥಿತಿ ಬದಲಾಗಿದೆ. ವಿದ್ಯೆಯ ಜೊತೆಗೆ ಸಂಸ್ಕಾರವಿರಬೇಕು, ಆಗ ಮನುಷ್ಯ ಒಳಿತನ್ನು ಅನುಸರಿಸುತ್ತಾನೆ ಎಂದು ಆಶೀರ್ವಚನ ನೀಡಿದರು.
ಮನುಷ್ಯ ಸುಖವನ್ನು ಮಾತ್ರ ಬಯಸುತ್ತಾನೆ. ಸುಖ ಪ್ರಾಮಾಣಿಕ ಕಾಯಕ ನಿಷ್ಠೆಯಿಂದ ಲಭಿಸುತ್ತದೆ ಎಂಬುದನ್ನು ಸತ್ಸಂಗ ತಿಳಿಸುತ್ತದೆ ಎಂದು ಆದ್ಯಾತ್ಮ ಚಿಂತಕ ಡಿ. ಸಿದ್ದೇಶ್ ತಿಳಿಸಿದರು.
ಶಿವಶರಣರ ಸಂಘ ಸುಜ್ಞಾನ ಬಿತ್ತುತ್ತದೆ. ನಾಲ್ಕು ಯುಗಗಳಲ್ಲೂ ಒಳ್ಳೆಯದೇ ಗೆದ್ದಿದೆ ಎಂದು ಕುಂಬಳೂರು ಹನುಮಂತಪ್ಪ ಹೇಳಿದರು.
ಸತ್ಸಂಗ ಪ್ರಸಾದ ದಾನಿಗಳಾದ ಕೂಲಂಬಿ ಮಹಾದೇವಪ್ಪ, ಮಾಕನೂರು ಹೊನ್ನಪ್ಪ ಮಾತನಾಡಿದರು. ನಂತರ ಶ್ರೀಗಳ ಕಿರೀಟ ಪೂಜೆ ವಿಜೃಂಭಣೆಯಿಂದ ನಡೆಯಿತು.
ಭಜನಾ ಮಂಡಳಿಯಿಂದ ಸಿದ್ದಾರೂಢ ಭಜನಾ ಹಾಡುಗಳು ಕೇಳಿಬಂದವು. ಕುಂಬಳೂರು ಕುಬೇರಪ್ಪ ಮತ್ತು ಸಿರಿಗೆರೆ ವೆಂಕಟೇಶ್ ಅವರಿಂದ ವಚನ ಗಾಯನ ನಡೆಯಿತು.
ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಸೇರಿದ್ದು, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ವಿಎಸ್‌ಎಸ್‌ಬಿನ್ ಮುಖ್ಯ ಕಾರ್ಯನಿವಾಹಕ ಶೇಖರ್ ಕಾರ್ಯಕ್ರಮ ನಡೆಸಿಕೊಟ್ಟರು.
ನಿವೃತ್ತ ಸುಬೇದಾರ್ ಶಿವಕುಮಾರ್, ಮಲ್ಲಾಡ್ ಕೃಷ್ಣಪ್ಪ, ಮಾಗೋಡು ಸಿದ್ದಪ್ಪ, ಹೊಸಮನಿ ಮಲ್ಲಪ್ಪ, ಡಿ ರಾಜಪ್ಪ, ಹೊರಟ್ಟಿ ಕರಿಬಸಪ್ಪ, ರೇವಣಸಿದ್ದಯ್ಯ, ಭಾವಿಕಟ್ಟಿ ಮಲ್ಲೇಶಪ್ಪ, ಹನುಮಂತ ಗೌಡ, ರೇವಣಸಿದ್ದಯ್ಯ, ಪತ್ರಕರ್ತ ಜಿಗಳಿ ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.