ಬಸವಾಪಟ್ಟಣ: ಸಮೀಪದ ಕಂಸಾಗರ ಗ್ರಾಮದಲ್ಲಿ ಶುಕ್ರವಾರ ವೀರಭದ್ರಸ್ವಾಮಿ ಕೆಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.
ಶುಕ್ರವಾರ ಮುಂಜಾನೆ ಹಸಿ ಕಟ್ಟಿಗೆಗಳನ್ನು ದೊಡ್ಡ ಕೆಂಡದ ಗುಂಡಿಗೆ ಭರ್ತಿ ಮಾಡಿ ದೇವರ ಮಂಗಳಾರತಿಯ ನಂತರ ಅಗ್ನಿ ಸ್ಪರ್ಶ ಮಾಡಲಾಯಿತು.
ಮಧ್ಯಾಹ್ನ ನಿಗಿ ನಿಗಿ ಕೆಂಡವನ್ನು ಗಂಗಾಪೂಜೆಯ ನಂತರ ಭಕ್ತರು ಉತ್ಸವಮೂರ್ತಿಗಳೊಂದಿಗೆ ತುಳಿದ ದೃಶ್ಯ ಮೈನವಿರೇಳಿಸುವಂತಿತ್ತು. ಉತ್ಸವದಲ್ಲಿ ಗ್ರಾಮದ ವೀರಭದ್ರಸ್ವಾಮಿ ಸೇರಿದಂತೆ ಆಂಜನೇಯ, ಗುಳ್ಳೆಮ್ಮ, ಉಡುಸಲಮ್ಮ, ಕಣಿವೆಬಿಳಚಿಯ ದುರ್ಗಾದೇವಿ, ಸಂಗಾಹಳ್ಳಿಯ ಬಸವೇಶ್ವರ, ಹೊಸಳ್ಳಿಯ ಚೌಡೇಶ್ವರಿದೇವಿಯ ಉತ್ಸವ ಮೂರ್ತಿಗಳೊಂದಿಗೆ ಭಕ್ತರು ಕೆಂಡ ಹಾಯ್ದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಉತ್ಸವದಲ್ಲಿ ಭಾಗವಹಿಸಿ ವೀರಭದ್ರಸ್ವಾಮಿ ಪೂಜೆ ಸಲ್ಲಿಸಿದರು. ಅನ್ನ ಸಂತರ್ಪಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.