ADVERTISEMENT

ಶಕ್ತಿ ಯೋಜನೆಗೆ ಆಟೊ ಚಾಲಕರ ವಿರೋಧ

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 16:16 IST
Last Updated 31 ಜುಲೈ 2023, 16:16 IST
ಅಣ್ಣಿಗೇರಿಯ ಅಮೃತೇಶ್ವರ ಆಟೋ ಚಾಲಕರು ಹಾಗೂ ಟೆಂಪೋ ಚಾಲಕರು, ಮಾಲೀಕರ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನಾ ರ್ಯಾಲಿ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸಿದರು.
ಅಣ್ಣಿಗೇರಿಯ ಅಮೃತೇಶ್ವರ ಆಟೋ ಚಾಲಕರು ಹಾಗೂ ಟೆಂಪೋ ಚಾಲಕರು, ಮಾಲೀಕರ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನಾ ರ್ಯಾಲಿ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸಿದರು.   

ಅಣ್ಣಿಗೇರಿ: ಶಕ್ತಿ ಯೋಜನೆಯನ್ನು ವಿರೋಧಿಸಿ ಇಲ್ಲಿನ ಅಮೃತೇಶ್ವರ ಆಟೊ ರಿಕ್ಷಾ ಚಾಲಕರ, ಟೆಂಪೋ ಚಾಲಕರ, ಮಾಲೀಕರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. 

 ಶಕ್ತಿ ಯೋಜನೆಯಿಂದ ಆಟೊ ಚಾಲಕರ ದುಡಿಮೆಗೆ ಸಂಕಷ್ಟ ಎದುರಾಗಿದೆ. ಇದರಿಂದ ವಾಹನಗಳ ವಿಮೆ ತುಂಬಲು ಆಗದ  ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರ್ಕಾರ ಆಟೊ ಮತ್ತು ಟೆಂಪೂಗಳಿಗೆ ಉಚಿತವಾಗಿ ವಿಮೆ ನೀಡಬೇಕು. ವಾಹನಗಳ ರೋಡ್‌ ಟ್ಯಾಕ್ಸ್‌ ಉಚಿತಗೊಳಿಸಬೇಕು ಎಂದು ಒತ್ತಾಯಿಸಿದರು.

 ಆಟೋ ಚಾಲಕರ ನಿಗಮ ಮಂಡಳಿಯನ್ನು ರಚನೆ ಮಾಡಬೇಕು. ಚಾಲಕರು ಅಪಘಾತ ಗೊಂಡರೆ ₹ 5 ಲಕ್ಷ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿರು.

ಅಮೃತೇಶ್ವರ ಆಟೊ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಚನ್ನಪ್ಪ ಬಣಗಾರ, ಅಮೃತೇಶ್ವರ ಟೆಂಪೋ ಮಾಲಕರ ಸಂಘದ ಅಧ್ಯಕ್ಷ ಅಲ್ಲಮಪ್ರಭು ದಿಡ್ಡಿ, ನಾಗಯ್ಯ ನವಲಗುಂದಮಠ, ಭರತೇಶ ಜೈನ, ವಸಂತ ಬೆನಕನಹಳ್ಳಿ, ಸುರೇಶ ಬೇವಿನಕಟ್ಟಿ, ಚಂದ್ರು ಅಂಗಡಿ, ಇಮಾಮಸಾಬ ನದಾಫ, ಇಬ್ರಾಹಿಂ ಅಸುಂಡಿ, ಎ.ಎಮ್.ದೊಡ್ಡಮನಿ, ರಸೂಲಸಾಬ ಖುದಾವಂದ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.