
ಧಾರವಾಡ: ‘ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳು ವಾಪಸ್ ಹೋಗುವಂತೆ ಪ್ರಧಾನಿ ಮೋದಿ ಕಟ್ಟುನಿಟ್ಟಿನ ಆದೇಶ ಹೊರಡಿಸಿ, ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸೂಚನೆಗೆ ಸ್ಪಂದಿಸಿಲ್ಲ’ ಎಂದು ಆರೋಪಿಸಿ ಬಿಜೆಪಿಯವರು ಬುಧವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಕಾರರು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿತ್ತು. ಸಿದ್ದರಾಮಯ್ಯ ಅವರು ಅದಕ್ಕೆ ಸ್ಪಂದಿಸದೆ ರಾಜಕಾರಣಕ್ಕಾಗಿ ಮುಸ್ಲಿಮರ ಓಲೈಕೆಯಲ್ಲಿ ತೊಡಗಿದ್ಧಾರೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ಧಾರೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಸಮಂಜಸವಾಗಿಲ್ಲ. ರಾಜ್ಯಪಾಲರು ಅವರನ್ನು ವಜಾ ಮಾಡಲು ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಮುಖಂಡರಾದ ಈರೇಶ ಅಂಚಟಗೇರಿ, ವಿಜಯಾನಂದ ಶಟ್ಟಿ, ಶಂಕರ ಶೇಳಕೆ, ಮಂಜುನಾಥ ಗಾಮನಗಟ್ಟಿ, ಶಿವಣ್ಣ ಬಡವನ್ನಣವರ, ಮೋಹನ ರಾಮದುರ್ಗ, ಶಂಕರಕುಮಾರ ದೇಸಾಯಿ, ನಾಗರಾಜ ನಾಯಕ, ಸುನೀಲ್ ಮೋರೆ, ಪ್ರಮೋದ, ಈರಣ್ಣ, ಶ್ರೀನಿವಾಸ ಕೊಟ್ಯನ್, ಸದಾಶಿವ ಭಜಂತ್ರಿ, ರಮೇಶ ದೊಡ್ಡವಾಡ, ಶಫಿ ಬಿಜಾಪುರಿ, ಶಿದ್ದು ಕಲ್ಯಾಣ ಶಟ್ಟಿ, ಬಸವರಾಜ ರುದ್ರಾಪುರ, ಬಸವರಾಜ ಬಾಳಗಿ, ಮಂಜುನಾಥ ನೀರಲಕಟ್ಟಿ, ಬಸವರಾಜ ಚಳಗೇರಿ, ಸುರೇಶ ಬೇದರೆ, ವಿಷ್ಣು ಕೊರಳ್ಳಿ, ಆನಂದ, ಮಂಜುನಾಥ ನಡಟ್ಟಿ, ರೂಪಾ, ಜ್ಯೋತಿ, ಚಂದ್ರಕಲಾ, ಪುಷ್ಪಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.