ADVERTISEMENT

ಧಾರವಾಡ | ರಕ್ತದಾನ: 205 ಯುನಿಟ್ ರಕ್ತ ಸಂಗ್ರಹ 

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:22 IST
Last Updated 26 ನವೆಂಬರ್ 2025, 5:22 IST
ಧಾರವಾಡದ ಜೆಎಸ್‍ಎಸ್ ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ಕಾರ್ಯದರ್ಶಿ ಅಜಿತ ಪ್ರಸಾದ ಚಾಲನೆ ನೀಡಿದರು
ಧಾರವಾಡದ ಜೆಎಸ್‍ಎಸ್ ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ಕಾರ್ಯದರ್ಶಿ ಅಜಿತ ಪ್ರಸಾದ ಚಾಲನೆ ನೀಡಿದರು   

ಧಾರವಾಡ: ನಗರದ ಜನತಾ ಶಿಕ್ಷಣ ಸಮಿತಿ ವತಿಯಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ 78ನೇ ಜನ್ಮದಿನದ ಪ್ರಯುಕ್ತ ಜೆಎಸ್‍ಎಸ್ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಜೆಎಸ್‍ಎಸ್ ಆವರಣದಲ್ಲಿ ಮಂಗಳವಾರ ರಕ್ತದಾನ ಶಿಬಿರ ಹಾಗೂ ಆರೋಗ್ಯ ಉಚಿತ ತಪಾಸಣೆ ಶಿಬಿರ ನಡೆಯಿತು. 205 ಯುನಿಟ್ ರಕ್ತ ಸಂಗ್ರಹಿಸಲಾಯಿತು.

ಜೆಎಸ್‍ಎಸ್ ಬಯಲು ರಂಗಮಂದಿರದಲ್ಲಿ ಗೀತಗಾಯನ ಕಾರ್ಯಕ್ರಮ 3000 ವಿದ್ಯಾರ್ಥಿಗಳು ಹಾಗೂ 200 ಶಿಕ್ಷಕರು ಗಾಯನ ಪ್ರಸ್ತುತಪಡಿಸಿದರು. ಮಂಜುನಾಥೇಶ್ವರ ಶಿಶುವಿಹಾರ ಶಾಲೆಯಲ್ಲಿ ಸಂಸ್ಕೃತ ನೃತ್ಯ ರೂಪಕ, ಮಹಿಳೆಯರಿಗಾಗಿ ಆತ್ಮ ರಕ್ಷಣಾ ಕಲೆ ಮತ್ತು ಕರಾಟೆ ತರಬೇತಿ, ಎಂಸಿಎ ಕಾಲೇಜಿನಲ್ಲಿ ಸರ್ಟಿಫಿಕೇಟ್ ಕೋರ್ಸ್‌ ಉದ್ಘಾಟಿಸಲಾಯಿತು. ವಿದ್ಯಾಗಿರಿ ಮೈಲಾರಲಿಂಗ ದೇವಸ್ಥಾನದ ಆವರಣದಲ್ಲಿ ಶ್ರದ್ಧಾಕೇಂದ್ರದ ಸ್ಚಚ್ಛತಾ ಕಾರ್ಯ ನಡೆಯಿತು. 

ಸನ್ನಿಧಿ ಸಭಾಭವನದಲ್ಲಿ `ಸನಾತನಿ ನೃತ್ಯ ರೂಪಕ' ಜರುಗಿತು. ಐಟಿಐ ವಿದ್ಯಾರ್ಥಿಗಳಿಂದ ಸತ್ತೂರಿನ ಆಶ್ರಯ ಕಾಲೊನಿ ಹಾಗೂ ಗೌಳಿ ಗಲ್ಲಿಯಲ್ಲಿ ಆರ್ಥಿಕ ಹಿಂದುಳಿದ ಮಹಿಳೆಯರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ದೂರ ಶಿಕ್ಷಣದ ಮಹತ್ವ ಕುರಿತು ಇಗ್ನೋ ಪ್ರಾದೇಶಿಕ ನಿರ್ದೇಶಕ ದೇವೇಂದ್ರ ಅವರು ಉಪನ್ಯಾಸ ನೀಡಿದರು. 27ಕ್ಕೂ ಹೆಚ್ಚು ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳು ನಡೆದವು.

ADVERTISEMENT

ಕಾರ್ಯದರ್ಶಿ ಅಜಿತ ಪ್ರಸಾದ ಜೆಎಸ್‍ಎಸ್ ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಆಡಳಿತಧಿಕಾರಿ ಅರಿಹಂತ ಪ್ರಸಾದ, ಎಂಸಿಎ ನಿರ್ದೇಶಕ ಸೂರಜ್ ಜೈನ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.