
ಧಾರವಾಡ: ಧಾರವಾಡದ ಅಮರ್ ಧರೆಣ್ಣವರ್ ಇಲ್ಲಿ ಭಾನುವಾರ ಮುಕ್ತಾಯವಾದ ರಾಜ್ಯಮಟ್ಟದ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.
ಜಿಲ್ಲಾ ಲಾನ್ ಟೆನಿಸ್ ಅಸೋಸಿಯೇಷನ್‌ನಿಂದ ನಗರದ ರಾಜಾಧ್ಯಕ್ಷ ಪೆವಿಲಿಯನ್ ಕೋರ್ಟ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅಮರ್ ಧರೆಣ್ಣವರ್ 8-2ರಿಂದ ಬೆಂಗಳೂರಿನ ವೇದಾಂಶ್ ಅವರನ್ನು ಮಣಿಸಿದರು.
ಡಬಲ್ಸ್ ವಿಭಾಗದಲ್ಲಿ ಅಮರ್ ಧರೆಣ್ಣವರ್ ಹಾಗೂ ದಾವಣಗೆರೆಯ ಬಸವರಾಜ ಜೋಡಿ ಪ್ರಶಸ್ತಿ ಗೆದ್ದುಕೊಂಡಿತು. ಅಮರ್ ಮತ್ತು ಬಸವರಾಜ 8–0ರಿಂದ ಧಾರವಾಡದ ಸಚಿನ್ ಕ್ಯಾರೆ ಹಾಗೂ ಶಿವರಾಜ ಪಾಟೀಲ ಅವರನ್ನು ಸೋಲಿಸಿದರು.
70+ ವಯಸ್ಸಿನವರು: ಧಾರವಾಡದ ಅರವಿಂದ್ ಯೆರಿ ಮತ್ತು ಆನಂದ್ ಯೆರಿ 6–3ರಿಂದ ಗದಗಿನ ಗಂಗಾಧರ್ ಥಡಿ ಮತ್ತು ಬಳ್ಳಾರಿಯ ಜೋಸೆಫ್ ಅವರನ್ನು ಮಣಿಸಿದರು.
65+ ವಯಸ್ಸಿನವರು: ಅರವಿಂದ್ ಯೆರಿ ಮತ್ತು ನಾಗರಾಜ ಅಂಬ್ಲಿ 6–1ರಿಂದ ಬೈಲಹೊಂಗಲದ ಚಂದ್ರಕಾಂತ ಹೊಸಮಠ ಹಾಗೂ ವಿಜಯಪುರದ ಶಶಿಧರ ಕಲಮಡಿ ಜೋಡಿಯನ್ನು ಸೋಲಿಸಿದರು.
55+ ವಯಸ್ಸಿನವರು: ಮೈಸೂರಿನ ಡಿ.ರವೀಂದ್ರ ಮತ್ತು ಭವರ್‌ಲಾಲ್ ಜೋಡಿಯು 7–5ರಿಂಂದ ಬಾಗಲಕೋಟೆಯ ಉಜ್ವಲ್ ಸಕ್ರಿ ಮತ್ತು ರಾಘವೇಂದ್ರ ಜೋಡಿ ಎದುರು ಜಯಿಸಿದರು.
ಧಾರವಾಡದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅಮರ್ ಧರೆನ್ನವರ ಅವರ ಆಟದ ವೈಖರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.