
ಶೀತಗಾಳಿ
ಧಾರವಾಡ: ತೀವ್ರ ಶೀತಗಾಳಿಯ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುನ್ನೆಚ್ಚರಿಕೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆರೋಗ್ಯ ಸಮಸ್ಯೆಯಾಗದಂತೆ ಎಚ್ಚರ ವಹಿಸಲು ಮಾರ್ಗಸೂಚಿಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ಧಾರೆ.
ಸಾರ್ವಜನಿಕರು ಸಾಧ್ಯವಾದಷ್ಟು ಮನೆಯೊಳಗೇ ಇರಬೇಕು. ಆರೋಗ್ಯಕರ ಆಹಾರ ಸೇವಿಸಬೇಕು ನಿರ್ಜಲೀಕರಣ ತಪ್ಪಿಸಲು ಅಲ್ಕೋಹಾಲ್ ರಹಿತ ಪಾನೀಯಗಳನ್ನು ಸೇವಿಸಬೇಕು.
ಒಂದು ಪದರದ ಭಾರವಾದ ಬಟ್ಟೆಗಳ ಬದಲು ಹಲವು ಪದರಗಳ ಹಗುರವಾದ ಹಾಗೂ ಬೆಚ್ಚಗಿನ ಬಟ್ಟೆಗಳನ್ನು ಧರಿಸಬೇಕು. ತಲೆ ಮುಚ್ಚಲು ಟೋಪಿ ಹಾಕಿಕೊಳ್ಳಬೇಕು. ತಾಪಮಾನ ವ್ಯವಸ್ಥೆ ಲಭ್ಯವಿಲ್ಲದಿದ್ದಲ್ಲಿ ಆಡಳಿತದಿಂದ ಒದಗಿಸಲಾದ ತಾಪನ ಕೇಂದ್ರಗಳಿಗೆ ತೆರಳಬಹುದು.
ರಸ್ತೆ ಬದಿ, ಉದ್ಯಾನಗಳು ಹಾಗೂ ಬಸ್ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ವೇಳೆಯಲ್ಲಿ ಯಾರೂ ಮಲಗದಂತೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.