ADVERTISEMENT

ಧಾರವಾಡ | ಗಣೇಶ ವಿಸರ್ಜನೆ ವೇಳೆ ಡಿ.ಜೆ ವಿಚಾರಕ್ಕೆ ಗಲಾಟೆ: ಲಾಠಿ ಬೀಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 5:15 IST
Last Updated 7 ಸೆಪ್ಟೆಂಬರ್ 2025, 5:15 IST
<div class="paragraphs"><p>ಗಣೇಶ ವಿಸರ್ಜನೆ ವೇಳೆ ಡಿ.ಜೆ ವಿಚಾರಕ್ಕೆ ಗಲಾಟೆ: ಲಾಠಿ ಬೀಸಿದ ಪೊಲೀಸರು</p></div>

ಗಣೇಶ ವಿಸರ್ಜನೆ ವೇಳೆ ಡಿ.ಜೆ ವಿಚಾರಕ್ಕೆ ಗಲಾಟೆ: ಲಾಠಿ ಬೀಸಿದ ಪೊಲೀಸರು

   

ಧಾರವಾಡ: ತಾಲ್ಲೂಕಿನ ನರೇಂದ್ರ ಗ್ರಾಮದಲ್ಲಿ ಶನಿವಾರ ರಾತ್ರಿ ಎರಡು ಓಣಿಗಳ ಗಣೇಶ ಮೂರ್ತಿಗಳ ವಿಸರ್ಜನೆ ಶೋಭಾಯಾತ್ರೆ ಸಂದರ್ಭದಲ್ಲಿ ಡಿ.ಜೆ ಸಂಗೀತ ವಿಚಾರದಲ್ಲಿ ಯುವಕರು ಜಗಳಕ್ಕೆ ಮುಂದಾದಾಗ ಪೋಲೀಸರು ಲಾಠಿ ಬೀಸಿ ಚದುರಿಸಿದ್ದಾರೆ.

ಪೋಲೀಸರು ಲಾಠಿ ಪ್ರಹಾರ ಮಾಡುತ್ತಿದ್ದಂತೆ ಜನರು ಓಡಿದ್ದಾರೆ. ಕೆಲವರಿಗೆ ಲಾಠಿ ಹೊಡೆತ ಬಿದ್ದಿವೆ.

ADVERTISEMENT

'ಎರಡೂ ಮೆರವಣಿಗೆಗಳು ಗ್ರಾಮದ ವೃತ್ತದ ಬಳಿ ಬಂದಾಗ ಯವಕರು ಡಿ.ಜೆ ಸಂಗೀತ ವಿಚಾರದಲ್ಲಿ ಸ್ಪರ್ಧೆಗೆ ಮುಂದಾಗಿ ಜಗಳವಾಡುವ ಹಂತಕ್ಕೆ ತಲುಪಿದರು. ಲಾಠಿ ಬೀಸಿ ಜನರನ್ನು ಚದುರಿಸಿದೆವು. ಎರಡೂ ಗಣಪತಿಗಳನ್ನು ವ್ಯವಸ್ಥಿತವಾಗಿ ವಿಸರ್ಜನೆ ಮಾಡಿಸಲಾಯಿತು' ಎಂದು ಪೋಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.