ಆರೋಪಿಗಳು
ಧಾರವಾಡ: ಕಳವು ಪ್ರಕರಣದ ಇಬ್ಬರು ಆರೋಪಿಗಳು ತಪ್ಪಿಸಿಕೊಳ್ಳಲು ಓಡುವಾಗ ಪೊಲೀಸರು ಕಾಲಿಗೆ ಗುಂಡು ಹೊಡೆದಿರುವ ಘಟನೆ ಉದಯಗಿರಿಯಲ್ಲಿ ನಸುಕಿನಲ್ಲಿ ನಡೆದಿದೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾರೆ.
ರಾಜೀವ್‌ಗಾಂಧಿ ನಗರದ ವಿಜಯ ಅಣ್ಣಿಗೇರಿ (35) ಹಾಗೂ ಮುಜಾಮಿಲ್ ಸೌದಾಗರ್ (21) ಕಾಲಿಗೆ ಗುಂಡು ಹೊಡೆಯಲಾಗಿದೆ. ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ.
‘ಗಿರಿನಗರದಲ್ಲಿ ಆರೋಪಿಗಳು ಬೈಕ್ ಕಳವು ಮಾಡಲು ಯತ್ನಿಸುವಾಗ ಬೆನ್ನಟ್ಟಿದೆವು. ಆರೋಪಿಗಳು ನಮ್ಮ ಕಡೆಗೆ ಕಲ್ಲು ತೂರಿ ತಪ್ಪಿಸಿಕೊಳ್ಳಲು ಓಡಿದರು. ಪಿಎಸ್‌ಐ ಮಲ್ಲಿಕಾರ್ಜುನ್ ಹೊಸೂರ್ ಮತ್ತು ಕಾನ್‌ಸ್ಟೆಬಲ್ ಇಸಾಕ್ ನಧಾಪ ಅವರಿಗೆ ಪೆಟ್ಟಾಗಿದೆ. ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದರೂ ಆರೋಪಿಗಳು ನಿಲ್ಲಲಿಲ್ಲ. ಇಬ್ಬರೂ ಆರೋಪಿಗಳ ಬಲಗಾಲಿಗೆ ಗುಂಡು ತಗುಲಿವೆ’ ಎಂದು ವಿದ್ಯಾಗಿರಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.