
ನವಲಗುಂದ: ಇ-ಖಾತಾ ವ್ಯವಸ್ಥೆಯಿಂದ ಆಸ್ತಿ ದಾಖಲೆಗಳ ಪಾರದರ್ಶಕತೆ ಹೆಚ್ಚಳವಾಗಲಿದ್ದು, ನಾಗರಿಕರಿಗೆ ಆಸ್ತಿ ಸಂಬಂಧಿತ ಸೇವೆಗಳು ಸುಲಭವಾಗಿ ಹಾಗೂ ವೇಗವಾಗಿ ಲಭ್ಯವಾಗಲಿವೆ ಎಂದು ಶಾಸಕ ಎನ್.ಎಚ್.ಕೋನರಡ್ಡಿ ತಿಳಿಸಿದರು.
ಅವರು ಮಂಗಳವಾರ ಪಟ್ಟಣದಲ್ಲಿ ಪುರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಕರಡು ಇ-ಖಾತಾ ವಿತರಣಾ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು. ಡಿಜಿಟಲ್ ವ್ಯವಸ್ಥೆ ಅಳವಡಿಕೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವುದರೊಂದಿಗೆ ಆಡಳಿತ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಲಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಎಸ್.ಪಿ.ಪೂಜಾರ ಮಾತನಾಡಿ, ಕರಡು ಇ-ಖಾತಾ ಕುರಿತು ಸಾರ್ವಜನಿಕರು ಅಗತ್ಯ ದಾಖಲೆ ಸಲ್ಲಿಸಿ ತಿದ್ದುಪಡಿ ಸಲಹೆ ನೀಡುವಂತೆ ಮನವಿ ಮಾಡಿದರು. ಇ-ಖಾತಾ ಯೋಜನೆಯು ನಾಗರಿಕ ಸ್ನೇಹಿ ಆಡಳಿತದತ್ತ ಮಹತ್ವದ ಹೆಜ್ಜೆಯಾಗಿದೆ ಎಂದರು.
ಶಿವಾನಂದ ತಡಸಿ, ಫರೀದಾಬೇಗಂ ಬಬರ್ಚಿ, ಅಪ್ಪಣ್ಣ ಹಳ್ಳದ, ಶರಣಪ್ಪ ಹಕ್ಕರಕಿ, ಸುರೇಶ ಮೇಟಿ, ಹಣಮಂತ ವಾಲೀಕಾರ, ಬಾಬಾಜಾನ ಮಕಾನಾದಾರ್, ಖ್ಯೆರುನಬಿ ನಾಶಿಪುಡಿ, ಹುಸೇನಬಿ ಧಾರವಾಡ, ಜ್ಯೋತಿ ಗೊಲ್ಲರ, ಪದ್ಮಾವತಿ ಪೂಜಾರ್, ಮಹಾಂತೇಶ ಭೋವಿ, ವಿಜಯಲಕ್ಷ್ಮಿ ಕಲಾಲ್, ಸಂತೋಷ್ ಪಾಟೀಲ, ಅಸ್ಫಕ್ ಚಹಾಹುಸೇನ್, ಬಸವರಾಜ ಈಟಿ, ಮಹಮ್ಮದಗೌಸ್ ಖುದಾವಂದ, ಲಕ್ಷ್ಮಣ ಹಳ್ಳದ ಅಣ್ಣಿಗೇರಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಮಂಜುನಾಥ ಮಾಯಣ್ಣವರ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.