ADVERTISEMENT

ತಿಮ್ಮಕ್ಕ ಪರಿಸರ ಪ್ರೇಮ ಮಾದರಿ: ಸಾಹಿತಿ ವೆಂಕಟೇಶ ಮಾಚಕನೂರ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 5:15 IST
Last Updated 17 ನವೆಂಬರ್ 2025, 5:15 IST
ಧಾರವಾಡದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಭಾವಚಿತ್ರಕ್ಕೆ ಗಣ್ಯರು ನಮನ ಸಲ್ಲಿಸಿದರು 
ಧಾರವಾಡದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಭಾವಚಿತ್ರಕ್ಕೆ ಗಣ್ಯರು ನಮನ ಸಲ್ಲಿಸಿದರು    

ಧಾರವಾಡ: ‘ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರು ಮಗುವಿನಂತೆ ಮರಗಳನ್ನು ಬೆಳೆಸಿದರು. ಪರಿಶುದ್ಧ ಸಾತ್ವಿಕ, ಆಧ್ಯಾತ್ಮ ಮನಸ್ಥಿತಿಯನ್ನು ಇಟ್ಟುಕೊಂಡು ಬದುಕಿದರು. ಅವರ ಪರಿಸರ ಪ್ರೇಮ ನಮ್ಮೆಲ್ಲರಿಗೂ ಮಾದರಿ’ ಎಂದು ಸಾಹಿತಿ ವೆಂಕಟೇಶ ಮಾಚಕನೂರ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಭಾನುವಾರ ಆಯೋಜಿಸಿದ್ದ ವೃಕ್ಷಮಾತೆ, ಸಾಲುಮರದ ತಿಮ್ಮಕ್ಕ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ತಿಮ್ಮಕ್ಕ ಅವರು ಮಕ್ಕಳಾಗದೇ ಇರುವುದರಿಂದ ಮರಗಳನ್ನೇ ಮಕ್ಕಳೆಂದು ಪೋಷಿಸಿ ಬೆಳೆಸಿದರು. ಅವರು ಯಾವುದೇ ಪ್ರಶಸ್ತಿಯ ಆಸೆಗಾಗಿ ಅವರು ಗಿಡಗಳನ್ನು ನೆಟ್ಟವರಲ್ಲ. ಸ್ವಯಂ ಪ್ರೇರಿತರಾಗಿ ಜನೋಪಯೋಗಕ್ಕಾಗಿ ನೆಟ್ಟವರು. ಪರಿಸರ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ. ಹೆದ್ದಾರಿಯ ಪಕ್ಕದಲ್ಲಿ ಮರಗಳನ್ನು ಬೆಳೆಸಬೇಕಾದ ಅವಶ್ಯವಿದೆ’ ಎಂದರು.

ADVERTISEMENT

ಆಲೂರು ವೆಂಕಟರಾವ್ ಟ್ರಸ್ಟ್ ಅಧ್ಯಕ್ಷ ರಂಜಾನ್ ದರ್ಗಾ ಮಾತನಾಡಿ, ‘ತಿಮ್ಮಕ್ಕ ಅವರ ಜೀವನ ವಿಧಾನವೇ ಪವಿತ್ರವಾದದ್ದು.

ಪ್ರಕಾಶ ಭಟ್, ಸದಾಶಿವ ಮರ್ಜಿ, ಪಂಡಿತ ಮುಂಜಿ, ಸತೀಶತುರಮರಿ, ನಿರ್ಮಲಾದೇವಿ ಅವರು ನುಡಿನಮನ ಸಲ್ಲಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಬಸವಪ್ರಭು ಹೊಸಕೇರಿ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ಮಲ್ಲಿಕಾಘಂಟಿ, ಸಿದ್ಧರಾಮ ಹಿಪ್ಪರಗಿ, ಪ್ರಕಾಶ ಮಲ್ಲಿಗವಾಡ, ಸಿ.ಎಲ್. ಹೊಸಮನಿ, ಶ್ರೀಮಂತ ಹೊಸಮನಿ, ಬಸವರಾಜ ಕಿನ್ನಾಳ, ಶಾರದಾದಾಬಡೆ, ಸರಸ್ವತಿ ಪೂಜಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.