ADVERTISEMENT

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟ ಪ್ರಕರಣ: ವರ್ಷವಾದರೂ ಪತ್ತೆಯಾಗದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 16:40 IST
Last Updated 20 ಅಕ್ಟೋಬರ್ 2020, 16:40 IST
   

ಹುಬ್ಬಳ್ಳಿ: ನಗರದ ರೈಲು ನಿಲ್ದಾಣದ ಮೊದಲ ಪ್ಲಾಟ್‌ ಫಾರ್ಮ್‌ನಲ್ಲಿ ನಿಗೂಡ ವಸ್ತು ಸ್ಪೋಟಗೊಂಡು ಬುಧವಾರಕ್ಕೆ (ಅ. 21) ಒಂದು ವರ್ಷವಾದರೂ ಆರೋಪಿಗಳ ಪತ್ತೆಯಾಗಿಲ್ಲ.

ಸ್ಫೋಟಕ ವಸ್ತುಇದ್ದ ಪ್ಲಾಸ್ಟಿಕ್‌ ಬಕೆಟ್‌ ಮೇಲೆ ‘ನೋ ಬಿಜೆಪಿ, ನೋ ಆರ್‌ಎಸ್‌ಎಸ್‌’ ಎಂದು ಬರೆಯಲಾಗಿತ್ತು. ಮಹಾರಾಷ್ಟ್ರ ಶಾಸಕ ಪ್ರಕಾಶ ಅಬೀದ್‌ಕರ್‌ ಹೆಸರೂ ಇತ್ತು. ಆದ್ದರಿಂದ ಈ ಘಟನೆಹಲವು ಅನುಮಾನಗಳಿಗೆ ಕಾರಣವಾಗಿತ್ತು. ಸ್ಪೋಟದಿಂದರೈಲುನಿಲ್ದಾಣದಲ್ಲಿಚಹಾ ಮಾರಾಟ ಮಾಡುತ್ತಿದ್ದ ಅರಳಿಕಟ್ಟಿ ಕಾಲೊನಿಯ ಹುಸೇನ್‌ ಸಾಬ್ ನಾಯಕವಾಲೆಅವರ ಬಲಗೈ ಸುಟ್ಟು ಕರಕಲಾಗಿತ್ತು.

ಕಡಿಮೆ ತೀವ್ರತೆಯ ಸ್ಫೋಟಕ ಹೊಂದಿದ್ದ, ಹಂದಿಗಳ ಹಾವಳಿ ತಪ್ಪಿಸಲು ಬಳಸುವ ಫೀಲ್ಡ್‌ ಬಾಂಬ್ ಸ್ಫೋಟವಾಗಿತ್ತು ಎನ್ನುವುದು ತನಿಖೆಯ ಬಳಿಕ ಪತ್ತೆಯಾಗಿತ್ತು. ಆದರೆ, ಘಟನೆಗೆ ಕಾರಣರಾದ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಇನ್ನೂ ಆಗಿಲ್ಲ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರೈಲ್ವೆ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ. ಬೋರಲಿಂಗಯ್ಯ ‘ಸ್ಫೋಟದ ತನಿಖೆಗಾಗಿ ನಮ್ಮ ತಂಡ ಹಲವು ಬಾರಿ ಮಹಾರಾಷ್ಟ್ರಕ್ಕೆ ಹೋಗಿ ಬಂದಿದೆ. ಇನ್ನಷ್ಟು ಮಾಹಿತಿಗಳನ್ನು ಕಲೆಹಾಕುವ ಕಾರ್ಯ ನಡೆಯುತ್ತಿದೆ.ಪ್ರಕರಣದ ವಿಚಾರಣೆ ಕೈಬಿಟ್ಟಿಲ್ಲ. ಆರೋಪಿಗಳನ್ನು ಪತ್ತೆ ಹಚ್ಚುವ ವಿಶ್ವಾಸವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.