
ಅಳ್ನಾವರ: ಪ್ರಸ್ತುತ ಸಮಾಜದಲ್ಲಿ ಜೀವಿಸುವ ಎಲ್ಲರೂ ಸಾಕ್ಷರಾಗಬೇಕು. ಹಣಕಾಸಿನ ಸಮರ್ಥ ನಿರ್ವಹಣೆ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಕೆಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಸ್.ವಿ.ಹೂಗಾರ ಹೇಳಿದರು.
ಕೆಸಿಸಿ ಬ್ಯಾಂಕ್, ನಬಾರ್ಡ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಪಿಕೆಪಿಎಸ್ ಸಭಾ ಭವನದಲ್ಲಿ ನಡೆದ ಆರ್ಥಿಕ ಹಾಗೂ ಡಿಜಿಟಲ್ ಸೇವಾ ಸೌಲಭ್ಯಗಳ ಕುರಿತ ತಿಳುವಳಿಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
’ಎಲ್ಲರೂ ಕಡ್ಡಾಯವಾಗಿ ಬ್ಯಾಂಕಿನಲ್ಲಿ ತಮ್ಮ ಖಾತೆ ತೆರೆದು ಹಣಕಾಸಿನ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಉಳಿತಾಯ ಮನೋಭಾವ ಜೊತೆಗೆ ಆರ್ಥಿಕ ಸದೃಡತೆ ಹೊಂದಬೇಕು ಎಂದರು.
ಕೆಸಿಸಿ ಬ್ಯಾಂಕಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಮುದ್ದತ್ ಠೇವು ಇಟ್ಟವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ರೈತರ ಪ್ರಶ್ನೆಗಳಿಗೆ ಉತ್ತರಿಸಲಾಯಿತು.
ಪಿಕೆಪಿಎಸ್ ಸಂಘದ್ ಅಧ್ಯಕ್ಷ ಬಸವೇಶ ಹಟ್ಟಿಹೊಳಿ ಅಧ್ಯಕ್ಷತೆ ವಹಿಸಿದ್ದರು. ಕೆಸಿಸಿ ಬ್ಯಾಂಕಿನ ಆಧಿಕಾರಿಗಳಾದ ಎಂ.ಬಿ. ಪೂಜಾರ, ಬಿ.ಎಫ್ ಹೊಸಮನಿ, ಅರವಟಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ಜೋಡಟ್ಟಿ, ಉಮೇಶ ಭೂಮಣ್ಣವರ, ನಾರಾಯಣ ಮೋರೆ, ಪರಮೇಶ್ವರ ತೇಗೂರ, ಸಿದ್ದಪ್ಪ ಕಿರ್ಲೋಸ್ಕರ್, ಬಿ.ಎನ್. ಲಲಿತಾ, ವ್ಯವಸ್ಥಾಪಕ ಮಲ್ಲಿಕಾರ್ಜುನ ಶಿವಾಪೂರ, ಮಾದವ ಕುಲಕರ್ಣಿ ಇದ್ದರು. ಪಿಕೆಪಿಎಸ್ ಕಾರ್ಯದರ್ಶಿ ವಿನಾಯಕ ದುಲಬಾಜಿ ಸ್ವಾಗತಿಸಿದರು. ಪವಿತ್ರಾ ಭಜಂತ್ರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.