ADVERTISEMENT

ಹುಬ್ಬಳ್ಳಿ‌–ಧಾರವಾಡ ಮಹಾನಗರ ಪಾಲಿಕೆ ಚುನಾವಣೆ: ಪತಿಗೆ ಗೆಲುವು, ಪತ್ನಿಗೆ ಸೋಲು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 7:54 IST
Last Updated 6 ಸೆಪ್ಟೆಂಬರ್ 2021, 7:54 IST
   

ಹುಬ್ಬಳ್ಳಿ: ಹುಬ್ಬಳ್ಳಿ‌–ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿರಾಜಾರಾವ್ (ದೊರೈರಾಜ್) ಮಣಿಕುಂಟ್ಲಾ ಹಾಗೂಸುಧಾ ಮಣಿಕುಂಟ್ಲಾದಂಪತಿಸ್ಪರ್ಧಿಸಿದ್ದರು. ಪತ್ನಿ ಸುಧಾ ಸೋಲು ಕಂಡರೆ, ಪತಿ ರಾಜಾರಾವ್ 500 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ವಾರ್ಡ್‌ 61ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಾರಾವ್ ಸ್ಪರ್ಧಿಸಿದ್ದರು. ಅವರ ಪತ್ನಿ ಸುಧಾ ಅವರು ಪಕ್ಕದ ಮಹಿಳಾ ಮೀಸಲು ವಾರ್ಡ್ 59ರ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಸುಧಾ ಅವರು ಕಳೆದ ಬಾರಿ 49ನೇ ವಾರ್ಡ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ವಾರ್ಡ್‌ಗಳ ಮರು ವಿಂಗಡಣೆ ಬಳಿಕ ಅವರು ಪ್ರತಿನಿಧಿಸಿದ್ದ ವಾರ್ಡ್‌ನ ಪ್ರದೇಶಗಳು ವಾರ್ಡ್ 61 ಮತ್ತು 59ರಲ್ಲಿ ಹಂಚಿ ಹೋಗಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.