ADVERTISEMENT

ಹು-ಧಾ ಮಹಾನಗರ ಪಾಲಿಕೆ: ಜ್ಯೋತಿ‌ ಪಾಟೀಲ ನೂತನ ಮೇಯರ್

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 9:06 IST
Last Updated 30 ಜೂನ್ 2025, 9:06 IST
<div class="paragraphs"><p>ಜ್ಯೋತಿ ಪಾಟೀಲ</p></div>

ಜ್ಯೋತಿ ಪಾಟೀಲ

   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್‌ ಆಗಿ ಧಾರವಾಡದ ಜ್ಯೋತಿ ಪಾಟೀಲ (ವಾರ್ಡ್‌ 19) ಮತ್ತು ಉಪ ಮೇಯರ್ ಆಗಿ ಹುಬ್ಬಳ್ಳಿಯ ಸಂತೋಷ್‌ ಚವ್ಹಾಣ್‌ (ವಾರ್ಡ್ 41) ಆಯ್ಕೆಯಾದರು‌.

ಪಾಲಿಕೆಯ ಹುಬ್ಬಳ್ಳಿಯ ಸಭಾಭವನದಲ್ಲಿ ಮೇಯರ್‌, ಉಪಮೇಯರ್ ಆಯ್ಕೆಗೆ ಸೋಮವಾರ ಚುನಾವಣೆ ನಡೆಯಿತು. ಅಧಿಸೂಚನೆ ಪ್ರಕಾರ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗ ‘ಬ’ಗೆ ಮೀಸಲಾಗಿತ್ತು.

ADVERTISEMENT

ಬಿಜೆಪಿಯ ಜ್ಯೋತಿ ಪಾಟೀಲ 47 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ನ ಹುಬ್ಬಳ್ಳಿಯ ಸುವರ್ಣಾ ಕಲ್ಲಕುಂಟ್ಲ (ವಾರ್ಡ್ 59) 37 ಮತಗಳನ್ನು ಪಡೆದರು.

ಎಐಎಂಐಎಂನಿಂದ ಸ್ಪರ್ಧಿಸಿದ್ದ ವಾರ್ಡ್ 76ರ ಸದಸ್ಯೆ ವಹಿದಾಖಾನಂ ಕಿತ್ತೂರು 3 ಮತಗಳನ್ನು ಪಡೆದರು.

ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿಯ ಸಂತೋಷ್ ಚವ್ವಾಣ್ 47 ಮತಗಳನ್ನು ಪಡೆದರೆ, ಕಾಂಗ್ರೆಸ್ ನ ಧಾರವಾಡದ ಶಂಭುಗೌಡ ಸಾಲಮನಿ (ವಾರ್ಡ್ 14) ಅವರು 37 ಮತಗಳನ್ನು ಪಡೆದರು.

ಸಂತೋಷ್ ಚವ್ವಾಣ್

ಜ್ಯೋತಿ ಪಾಟೀಲ ಹು-ಧಾ ಮಹಾನಗರ ಪಾಲಿಕೆಯ ಎಂಟನೇ ಮಹಿಳಾ ಮೇಯರ್ ಆಗಿದ್ದಾರೆ. ಅವರು ಮೊದಲ‌ ಬಾರಿಗೆ ಪಾಲಿಕೆ ಸದಸ್ಯೆಯಾಗಿದ್ದಾರೆ.

ಸಂತೋಷ್ ಚವ್ವಾಣ್ ಅವರು ಮೊದಲ ಬಾರಿಗೆ ಪಾಲಿಕೆ ಸದಸ್ಯರಾಗಿದ್ದು, ಬಿಜೆಪಿ ಯುವ ಮೋರ್ಚಾ, ಹು-ಧಾ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟೆಣ್ಣವರ ಫಲಿತಾಂಶ ಘೋಷಿಸಿದರು. ಪ್ರಾದೇಶಿಕ ಆಯುಕ್ತರ ಕಾರ್ಯಾಲಯ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ಎಸ್.ಎಸ್.ಬಿರಾದಾರ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಪರಿಷತ್ ಕಾರ್ಯದರ್ಶಿ ಇಸ್ಮಾಯಿಲ್ ಶಿರಹಟ್ಟಿ ಇದ್ದರು‌.

ಕೇಂದ್ರ‌ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮತದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.