ADVERTISEMENT

ಲಾಕ್‌ಡೌನ್‌ನ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಆರ್. ಆಶೋಕ್

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 2:35 IST
Last Updated 21 ಮಾರ್ಚ್ 2021, 2:35 IST
ಛಬ್ಬಿಯ ಹಿರೇಕೆರೆಯಲ್ಲಿ ಸಚಿವರ ವಾಯುವಿಹಾರ
ಛಬ್ಬಿಯ ಹಿರೇಕೆರೆಯಲ್ಲಿ ಸಚಿವರ ವಾಯುವಿಹಾರ   

ಛಬ್ಬಿ, (ಹುಬ್ಬಳ್ಳಿ): ರಾಜ್ಯದಲ್ಲಿ ನಾವು ಕೋವಿಡ್ ನಡುವೆಯೂ ಬದುಕಬೇಕಿದೆ. ಹೀಗಾಗಿ ಸುರಕ್ಷತಾ ಅಂತರ ಕಾಪಾಡಿಕೊಂಡು ಹೋಗಬೇಕಿದೆ. ಲಾಕ್ ಡೌನ್ ಹಾಗೂ ಸೆಮಿ ಲಾಕ್ ಡೌನ್‌ನಯಾವುದೇಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಶನಿವಾರ ಛಬ್ಬಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಅವರು ಭಾನುವಾರ ಬೆಳಿಗ್ಗೆ ಹಿರೇ‌ಕೆರೆಯಲ್ಲಿ ವಾಯುವಿಹಾರ ಮಾಡುತ್ತಾ, ಉತ್ತರ ಕರ್ನಾಟಕದ‌ ಜನರ ಸಂಭ್ರಮವೇ‌ ನನ್ನ ‌ಉತ್ಸಾಹ ಹೆಚ್ಚಿಸಿದೆ ಎಂದರು.

ಗ್ರಾಮದಲ್ಲಿ ಮೋಡಕವಿದ‌ ವಾತಾವರಣವಿದ್ದು, ಮಲೆನಾಡಿದಂತೆ ಭಾಸವಾಗುತ್ತಿದೆ. ಇಲ್ಲಿನ ವಾತಾವರಣ ‌ನೋಡಿದರೆ ಹುಬ್ಬಳ್ಳಿಯಲ್ಲಿ ಇದ್ದೇನೆ ಅನಿಸುವುದೇ ಇಲ್ಲ. ಅಧಿಕಾರಿಗಳು-ಜನರ‌ ನಡುವಿನ ಕಂದಕ ಕಡಿಮೆ ಮಾಡುವುದು ಗ್ರಾಮ ವಾಸ್ತವ್ಯದ ಮೂಲ ಉದ್ದೇಶ ಎಂದು ಸಚಿವರು ತಿಳಿಸಿದರು.

ADVERTISEMENT

ಅಧಿಕಾರಿಗಳು ಮನಸ್ಸು ‌ಮಾಡಿ‌ ಹಳ್ಳಿ‌ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ಉತ್ತರ ಕರ್ನಾಟಕದ ಜನ ನಮ್ಮನ್ನು ಎತ್ತಿಕೊಂಡು‌ ಮೆರೆದಾಡುತ್ತಾರೆ. ಆದ್ದರಿಂದ ನಾವು ಜನರಿಗೆ ಆದಷ್ಟು ಹತ್ತಿರವಾಗಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಹತ್ತಿರ ಬರಬೇಕು. ಅದರಿಂದ ಹಳ್ಳಿಗಳ ಜನರಿಗೆ ನೆರವಾಗುತ್ತದೆ ಎಂದು ಸಚಿವ ಅಶೋಕ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.