ಹುಬ್ಬಳ್ಳಿ: ‘ಜನಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ರಾಜ್ಯ ಸರ್ಕಾರ ನಡೆಸಲು ಹೊರಟಿರುವ ಸಮೀಕ್ಷೆಗೆ ಅಧಿಕೃತ ಮಾನ್ಯತೆ ಇಲ್ಲ. ಈ ಹಿಂದೆ ಸಮೀಕ್ಷೆ ಹೆಸರಲ್ಲಿ ₹400 ಕೋಟಿ ಕಳೆದಿದ್ದರು. ಈಗ ಮತ್ತೆ ಹಣ ವ್ಯರ್ಥ ಮಾಡಲು ಹೊರಟಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೋನಿಯಾ ಗಾಂಧಿ ಅವರ ಸೂಚನೆಯಂತೆ ಹಿಂದೂ ಸಮಾಜವನ್ನು ಒಡೆಯಲು ಕಾಂಗ್ರೆಸ್ ಪಕ್ಷ ಹೊರಟಿದೆ. ರಾಜ್ಯ ಸರ್ಕಾರ ಯಾವ ಆಧಾರದಲ್ಲಿ ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಜಾತಿಗಳನ್ನು ಸೃಷ್ಟಿಸಿದೆ’ ಎಂದು ಪ್ರಶ್ನಿಸಿದರು.
‘ಒಕ್ಕಲಿಗರ ಸಮಾಜದ ಸಭೆಯಲ್ಲಿ ಸಹ ಸಮೀಕ್ಷೆಗೆ ವಿರೋಧ ವ್ಯಕ್ತವಾಗಿದ್ದು,
ಮುಂದೂಡುವಂತೆ ಒತ್ತಾಯಿಸಿದ್ದಾರೆ. ಸಮೀಕ್ಷೆ ಮಾಡಿದರೆ →ಒಕ್ಕಲಿಗ →ಸಮಾಜದಲ್ಲಿ ತಮ್ಮ →ನಾಯಕತ್ವ →ಹೋಗಲಿದೆ →ಎಂಬುದು→ ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಾಗಿದೆ. ಸಿದ್ದರಾಮಯ್ಯ ಎಡಪಂಥೀಯವಾದಿ. ಅವರು ಮತಾಂಧ ಶಕ್ತಿಗಳಿಗೆ ಪ್ರೇರಣೆ ಕೊಡುತ್ತಿದ್ದಾರೆ’ ಎಂದು ಟೀಕಿಸಿದರು.
‘ಮತಾಂತರವಾದವರಿಗೆ ಮೀಸಲಾತಿ ಇಲ್ಲ ಎಂಬುದನ್ನು ಸಂವಿಧಾನದಲ್ಲಿ ಹೇಳಲಾಗಿದೆ. ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆ ಇರಲಿಲ್ಲ. ಯಾವುದೋ ಕಾಲಘಟ್ಟದಲ್ಲಿ ಈ ಕೆಟ್ಟ ಪದ್ಧತಿ ಆರಂಭವಾಯಿತು. ಇದರಿಂದ ನಮ್ಮ ಬಂಧುಗಳನ್ನು ಸಮಾಜದಿಂದ ದೂರ ಇಡುವ ಪರಿಸ್ಥಿತಿ ನಿರ್ಮಾಣವಾಯಿತು. ಅವರಿಗೆ ಸಾಮಾಜಿಕ ಸಮಾನತೆ ಇಲ್ಲದ ಕಾರಣ ಮೀಸಲಾತಿ ಆರಂಭಿಸಲಾಯಿತು. ಆದರೆ, ಈಗ ಎಸ್‌ಟಿ ಕ್ರಿಶ್ಚಿಯನ್ ಎಂಬ ಜಾತಿ ಸೃಷ್ಟಿಸಿ ಅವರಿಗೆ ಮೀಸಲಾತಿ ಕೊಡಲು ರಾಜ್ಯ ಸರ್ಕಾರ ಹೊರಟಿದೆ’ ಎಂದು ಆರೋಪಿಸಿದರು.
ಮತ ಕಳವು ಪ್ರಕರಣಗಳ ಕುರಿತು ದಾಖಲಾಗಿರುವ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ
ರಚಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಎಸ್ಐಟಿ ರಚನೆಯಿಂದ ಏನೂ ಅಗುವುದಿಲ್ಲ. ಜನರು ತಮಗೆ ಮತ ಹಾಕಿಲ್ಲ ಎಂದು ರಾಹುಲ್ ಗಾಂಧಿ ಅವರು ಸಂವಿಧಾನ ಬದ್ಧವಾದ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ’ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.