ADVERTISEMENT

ಗುಣಮಟ್ಟದ ಕಾಮಗಾರಿಯಾಗುವಂತೆ ನೋಡಿಕೊಳ್ಳಿ: ಶಾಸಕ ಎನ್.ಎಚ್‌. ಕೋನರಡ್ಡಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 4:38 IST
Last Updated 29 ಡಿಸೆಂಬರ್ 2025, 4:38 IST
ನವಲಗುಂದ ಸಮೀಪದ ನಾಗರಹಳ್ಳಿ ಗ್ರಾಮದಲ್ಲಿನ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಎನ್‌.ಎಚ್ ಕೋನರಡ್ಡಿ ಚಾಲನೆ ನೀಡಿದರು
ನವಲಗುಂದ ಸಮೀಪದ ನಾಗರಹಳ್ಳಿ ಗ್ರಾಮದಲ್ಲಿನ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಎನ್‌.ಎಚ್ ಕೋನರಡ್ಡಿ ಚಾಲನೆ ನೀಡಿದರು   

ನವಲಗುಂದ: ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎನ್ನುವುದು ಸರ್ಕಾರದ ಉದ್ದೇಶ. ಸಾರ್ವಜನಿಕರು ಕೂಡ ಗ್ರಾಮದಲ್ಲಿ ನಡೆಯುವ ಕಾಮಗಾರಿ ಪರಿಶೀಲನೆ ನಡೆಸಿ ಗುಣಮಟ್ಟದ ಕಾಮಗಾರಿ ಆಗುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಎನ್.ಎಚ್‌. ಕೋನರಡ್ಡಿ ತಿಳಿಸಿದರು.

ನಾಗರಹಳ್ಳಿ ಗ್ರಾಮದ ಶರಣ ಬಸವೇಶ್ವರ ಮಠದ ಎದುರಿಗೆ ಕೆಆರ್‌ಐಡಿಎಲ್ ಇಲಾಖೆ ಅಡಿಯಲ್ಲಿ ₹30 ಲಕ್ಷ ವೆಚ್ಚದಲ್ಲಿ ಚರಂಡಿ ಹಾಗೂ ಸಿಸಿ ರಸ್ತೆ ಕಾಮಗಾರಿ ಹಾಗೂ ನಿರ್ಮಿತಿ ಕೇಂದ್ರದ ಅಡಿಯಲ್ಲಿ ಸಂಗಪ್ಪ ಚವಡಿ ಅವರ ಮನೆಯಿಂದ ನಾಗರಹಳ್ಳಿ-ಬಸಾಪೂರ ರಸ್ತೆಯವರೆಗೆ ₹30 ಲಕ್ಷಗಳ ವೆಚ್ಚದಲ್ಲಿ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೇರವರಿಸಿ ಮಾತನಾಡಿದರು.

ಅಣ್ಣಿಗೇರಿ ಪುರಸಭೆ ಅಧ್ಯಕ್ಷ ‌ಶಿವಾನಂದ ಬೆಳಹಾರ, ಶರಣಪ್ಪ ದ್ಯಾಮನಗೌಡ, ಶಂಕರಗೌಡ ಪಾಟೀಲ, ಸಂಗಪ್ಪ ಗಡ್ಡಿ, ದ್ಯಾಮಣ್ಣ ಕರಿ, ಬಸವರಾಜ ಬೀರಣ್ಣವರ, ಸಿದ್ಧಾರ್ಥ ಡಂಬಳ, ಯಲ್ಲಪ್ಪ ಭಜಂತ್ರಿ, ಶರಣಪ್ಪ ಕಂಬಳಿ ಇತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.