
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಗಣಕವಿಜ್ಞಾನ ಅಧ್ಯಯನ ವಿಭಾಗ ವತಿಯಿಂದ ಡಿ.15 ಮತ್ತು 16 ರಂದು ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ‘ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ (ಎಐ)’ ಅಂತರರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ’ ಎಂದು ಕುಲಪತಿ ಪ್ರೊ.ಎ.ಎಂ.ಖಾನ್ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂಟರ್‌ನ್ಯಾಷನಲ್ ಆನ್ ರೆಸ್ಪಾನ್ಸ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಪಿ.ಎಂ.ಉಷಾ ಯೋಜನೆ ಹಾಗೂ ವಿವಿಧ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ. ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ ಫರೀದ್ 15 ರಂದು ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆ ನೆರವೇರಿಸುವರು. ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಮಂಡಳಿ ಅಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ, ಮಂಗಳೂರು ವಿ.ವಿ ಕುಲಪತಿ ಪ್ರೊ.ಪಿ.ಎಲ್.ಧರ್ಮಾ, ದಾವಣಗೆರೆ ವಿ.ವಿ ಪ್ರೊ.ಬಿ.ಡಿ ಕುಂಬಾರ ಪಾಲ್ಗೊಳ್ಳುವರು. ಧಾರವಾಡ ಐಐಐಟಿ ನಿರ್ದೇಶಕ ಪ್ರೊ.ಎಸ್.ಆರ್.ಮಹದೇವ ಪ್ರಸನ್ನ ಅವರು ದಿಕ್ಸೂಚಿ ಭಾಷಣ ಮಾಡುವರು’ ಎಂದರು.
‘ಈ ಹೈಬ್ರಿಡ್ ವಿಚಾರ ಸಂಕಿರಣದ ಗೋಷ್ಠಿಗಳಲ್ಲಿ 47 ಸಂಶೋಧನಾ ಲೇಖನಗಳು ಮಂಡನೆಯಾಗಲಿವೆ. ಕ್ಯಾರ್ಡಿಫ್ ಮೇಟ್ರೋಪಾಲಿಟನ್ ವಿವಿ, ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜು, ಕೆ.ಎಲ್.ಇ ಟೆಕ್, ಯುನಿವರ್ಸಿಟಿ ಆಫ್ ವೇಲ್ಸ್, ವಿ.ವಿ ಯವರು ಆನ್ ಲೈನ್ ಮೂಲಕ ಭಾಗವಹಿಸುವರು’ ಎಂದರು.
‘16 ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಬೆಳಗಾವಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಅವರು ಸಮಾರೋಪ ಭಾಷಣ ಮಾಡುವರು. ಇಂಗ್ಲೆಂಡ್‌ನ ಕ್ಯಾರ್ಡಿಫ್ ವಿ.ವಿ ಡಾಟಾ.ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಅಂಗೇಶ್ ಅನುಪಮ್ ಭಾಗವಹಿಸುವರು’ ಎಂದರು.
ಗಣಕವಿಜ್ಞಾನ ವಿಭಾಗದ ಪ್ರೊ. ಈಶ್ವರ ಬೈದಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.